ಗ್ರಾಹಕರ ದೂರುಗಳ ಬೆನ್ನಿಗೆ ಕ್ರಮ: ಗ್ಯಾಸ್ ಏಜೆನ್ಸಿಗೆ ಅಂತಿಮ ಎಚ್ಚರಿಕೆ, ಬೆಳ್ತಂಗಡಿ ಆಹಾರ ಇಲಾಖೆಯಿಂದ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಗೆ ನೋಟೀಸ್ ಜಾರಿ

ಬೆಳ್ತಂಗಡಿ : ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಸರಬರಾಜು ಮಾಡದೆ ಕಚೇರಿಗೆ ಹೋದಾಗ ಪ್ರತಿನಿತ್ಯ ಗಲಾಟೆ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಆಹಾರ ಇಲಾಖೆಗೆ ಬಂದ ದೂರಿನ ಆಧಾರದಲ್ಲಿ ಕೊನೆಯ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಲಾಯಿಲ ಜಂಕ್ಷನ್ ಬಳಿಯಿರುವ ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗ್ರಾಹಕರಿಗೆ ಸರಿಯಾದ ಗ್ಯಾಸ್ ಸರಬರಾಜು ಮಾಡದೆ, ಸರಿಯಾಗಿ ವ್ಯವಹಾರ ನಡೆಸದೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಗಲಾಟೆ ಬಗ್ಗೆ ಲಿಖಿತ ದೂರು ಬಂದ ಮೇರೆಗೆ ಬೆಳ್ತಂಗಡಿ ಆಹಾರ ಇಲಾಖೆಯಿಂದ ಎ.22 ರಂದು ಶ್ರೀ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ.

ನೋಟಿಸ್ ನಲ್ಲಿರುವ ಅಂಶ: ಪ್ರತಿದಿನ ಈ ಕಚೇರಿಗೆ ಇದೇ ವಿಚಾರವಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ ಅಲ್ಲದೆ ನಿಮ್ಮ ಗ್ಯಾಸ್ ಏಜೆನ್ಸಿಯ ಬಗ್ಗೆ ಸರಿಯಾದ ಗ್ಯಾಸ್ ಸರಬರಾಜು ಇಲ್ಲದೆ ಇರುವ ಬಗ್ಗೆ ದೂರುಗಳು ಬರುತ್ತಿದ್ದು, ಅನಿಲ ಸಂಪರ್ಕ ಹೆಚ್ಚಾಗಿದ್ದು. ಅದಕ್ಕೆ ಸರಿಯಾಗಿ ಮೂಲಭೂತ ವ್ಯವಸ್ಥೆಯನ್ನು ಕೈಗೊಂಡು ಕೈಗೊಂಡ ಕ್ರಮದ ಬಗ್ಗೆ ಈ ಕಚೇರಿಗೆ ವರದಿ ಸಲ್ಲಿಸುವಂತೆ ತಿಳಿಸಿದೆ. ‘ಈ ಹಿಂದೆಯೂ ಸಾಕಷ್ಟು ಬಾರಿ ನಿಮಗೆ ಈ ಬಗ್ಗೆ ತಿಳಿಸಿದ್ದರೂ ಕ್ರಮ ವಹಿಸದೆ ಇರುವುದು ಉದ್ಧಟತನಕ್ಕೆ ಸಾಕ್ಷಿಯಾಗಿದೆ. ಗ್ರಾಹಕರು ಅವರಿಗೆ ಅನುಕೂಲವಾಗುವಂತೆ ಏಜೆನ್ಸಿ ಬದಲಾಯಿಸಲು ಹಕ್ಕು ಅವರಿಗೆ ಇದ್ದು. ನಿಮ್ಮಲ್ಲಿ ಬದಲಾವಣೆಗೆ ಮನವಿ ಮಾಡಿದ್ದಲ್ಲಿ ತಕ್ಷಣವೇ ಬದಲಾವಣೆಗೆ ಅವಕಾಶ ಮಾಡಿಕೊಡುವುದು ಹಾಗೂ ಮಾಡಿದ ಬಗ್ಗೆ ಈ ಕಚೇರಿಗೆ ಮಾಹಿತಿಯನ್ನು ನೀಡುವುದು. ಇದು ನಿಮಗೆ ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದ್ದು. ಮುಂದೆ ಈ ರೀತಿಯ ತಪ್ಪುಗಳು ಕಂಡಬಂದಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ಬೆಳ್ತಂಗಡಿ ಆಹಾರ ಇಲಾಖೆ ಎ.22 ರಂದು ನೀಡಿದ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

Spread the love
  • Related Posts

    ಶೃಂಗೇರಿ ಮರುಮತ ಏಣಿಯ ಬಳಿಕ ಸುಪ್ರೀಂ ಮೊರೆ ಹೋದ ಮಾಜಿ ಶಾಸಕ ಟಿ.ಡಿ.ರಾಜೇಗೌಡ

    ಹೊಸದಿಲ್ಲಿ: ಮರು ಮತ ಎಣಿಕೆ ಬಳಿಕ ತಮ್ಮ ಶಾಸಕ ಸ್ಥಾನ ರದ್ದಾಗಿರುವುದನ್ನು ಪ್ರಶ್ನಿಸಿ ಶೃಂಗೇರಿಯ ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದೆದುರು ಈ ವಿಷಯವನ್ನು ಹಿರಿಯ ವಕೀಲ ದೇವದಾಸ್ ಕಾಮತ್ ಪ್ರಸ್ತಾಪಿಸಿದರು. “ಇದು…

    Spread the love

    “Government of India” ನಾಮಫಲಕದ ಕಾರಿನ ಅಪಘಾತ: ಖಾಸಗಿ ವಾಹನಕ್ಕೆ ಸರ್ಕಾರಿ ಹೆಸರು ಯಾಕೆ?

    ಉಜಿರೆ: ಉಜಿರೆ-ಚಾರ್ಮಾಡಿ ರಸ್ತೆಯ ಅನುಗ್ರಹ ಸಮೀಪ ಸಂಭವಿಸಿದ ರಸ್ತೆ ಅಪಘಾತ ಇದೀಗ ಸಾರ್ವಜನಿಕರ ಗಮನವನ್ನು ಮತ್ತೊಂದು ಗಂಭೀರ ವಿಷಯದತ್ತ ಸೆಳೆದಿದೆ. ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಬುಲೋರೋ ಕಾರಿನ ಮೇಲೆ “Government of India” ಎಂಬ ನಾಮಫಲಕ ಅಳವಡಿಸಲಾಗಿದ್ದು, ಈ ಬಗ್ಗೆ…

    Spread the love

    You Missed

    ಶೃಂಗೇರಿ ಮರುಮತ ಏಣಿಯ ಬಳಿಕ ಸುಪ್ರೀಂ ಮೊರೆ ಹೋದ ಮಾಜಿ ಶಾಸಕ ಟಿ.ಡಿ.ರಾಜೇಗೌಡ

    • By admin
    • May 9, 2026
    • 21 views
    ಶೃಂಗೇರಿ ಮರುಮತ ಏಣಿಯ ಬಳಿಕ ಸುಪ್ರೀಂ ಮೊರೆ ಹೋದ ಮಾಜಿ ಶಾಸಕ ಟಿ.ಡಿ.ರಾಜೇಗೌಡ

    “Government of India” ನಾಮಫಲಕದ ಕಾರಿನ ಅಪಘಾತ: ಖಾಸಗಿ ವಾಹನಕ್ಕೆ ಸರ್ಕಾರಿ ಹೆಸರು ಯಾಕೆ?

    • By admin
    • May 9, 2026
    • 100 views
    “Government of India” ನಾಮಫಲಕದ ಕಾರಿನ ಅಪಘಾತ: ಖಾಸಗಿ ವಾಹನಕ್ಕೆ ಸರ್ಕಾರಿ ಹೆಸರು ಯಾಕೆ?

    ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸಹಿತ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು

    • By admin
    • May 9, 2026
    • 41 views
    ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಸಹಿತ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು

    ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ನಾಗರ ಹಾವುಗಳು

    • By admin
    • May 8, 2026
    • 125 views
    ನೆರಿಯ ಗ್ರಾಮದ ಕುಡುಮಡ್ಕದ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ನಾಗರ ಹಾವುಗಳು

    ಮೌಲ್ಯ ಕಳೆದುಕೊಂಡ ಮೌಲ್ಯಮಾಪನ! ವಿದ್ಯಾರ್ಥಿಗಳ ಖಿನ್ನತೆಗೆ ಇದೇ ಕಾರಣ, ಶಿಕ್ಷಣ ಸಚಿವರೇ ಈ ವ್ಯವಸ್ಥೆ ಯಾರಿಗಾಗಿ, ಯಾತಕ್ಕಾಗಿ?

    • By admin
    • May 7, 2026
    • 122 views
    ಮೌಲ್ಯ ಕಳೆದುಕೊಂಡ ಮೌಲ್ಯಮಾಪನ! ವಿದ್ಯಾರ್ಥಿಗಳ ಖಿನ್ನತೆಗೆ ಇದೇ ಕಾರಣ, ಶಿಕ್ಷಣ ಸಚಿವರೇ ಈ ವ್ಯವಸ್ಥೆ ಯಾರಿಗಾಗಿ, ಯಾತಕ್ಕಾಗಿ?

    ಬೆಳ್ತಂಗಡಿ: ಎಸ್ಐಟಿ ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣವರ್, ಹಳೇಯ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ ತಂಡ!!!

    • By admin
    • May 7, 2026
    • 51 views
    ಬೆಳ್ತಂಗಡಿ: ಎಸ್ಐಟಿ ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣವರ್, ಹಳೇಯ ಮೊಬೈಲ್ ವಶಕ್ಕೆ ಪಡೆದ ಎಸ್ಐಟಿ ತಂಡ!!!