ಮಂಗಳೂರು: ರಾಜ್ಯದ ವಿವಿಧೆಡೆ ಗ್ರಾಮ ಪಂಚಾಯತ್ ಗೆ ಎರಡನೇ ಹಂತದ ಮತದಾನ ನಡೆಯಲಿದ್ದು, ಈ ಕೆಳಗಿನ ದಾಖಲಾತಿಗಳು ನಿಮ್ಮಲ್ಲಿದ್ದರೆ ನಿಮಗೂ ಮತ ಚಲಾಯಿಸಲು ಅವಕಾಶವಿದೆ.
ಮತದಾನಕ್ಕೆ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ/ ಕೇಂದ್ರ ಸರ್ಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಗುರುತಿನ ಚೀಟಿ, ಬ್ಯಾಂಕ್/ಕಿಸಾನ್/ಅಂಚೆ ನೀಡಿರುವ ಗುರುತಿನ ಚೀಟಿ, ಮಾನ್ಯತೆ/ ನೋಂದಾಯಿತ ವಿದ್ಯಾಸಂಸ್ಥೆಗಳ ಗುರುತಿನ ಚೀಟಿ, ಪಿಂಚಣಿ ಪಾವತಿ ಆದೇಶಗಳು/ ಮಾಜಿ ಯೋಧರ ಗುರುತಿನ ಚೀಟಿ, ಪಡಿತರ ಚೀಟಿ, ಅಂಗವಿಕಲ ಗುರುತಿನ ಚೀಟಿ, C.S.D ಕ್ಯಾಂಟೀನ್ ಕಾರ್ಡ್, ಸಂಧ್ಯಾ/ ಸುರಕ್ಷಾ ಯೋಜನೆಯ ಗುರುತಿನ ಚೀಟಿ, ಉದ್ಯೋಗ ಕಾರ್ಡ್/ ನರೇಗಾ, ಯಶಸ್ವಿನಿ ಕಾರ್ಡ್, ಹಿರಿಯ ನಾಗರೀಕರ ಗುರುತಿನ ಚೀಟಿ, ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ಮೊದಲಾದವುಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.