ವೋಟರ್​​ ಐಡಿಗೆ ಆಧಾರ್​​ ಲಿಂಕ್​​; ಲೋಕಸಭೆಯಲ್ಲಿ ಬಿಲ್​ ಪಾಸ್​​ ವೋಟರ್​​ ಐಡಿಗೆ ಆಧಾರ್​​ ಲಿಂಕ್​​ ಮಾಡೋದು ಹೀಗೆ ಎಂದು ತಿಳಿಯಲು ಇಲ್ಲಿ ಬೇಟಿ ನೀಡಿ

ತೀವ್ರ ವಿರೋಧದ ನಡುವೆಯೂ ವೋಟರ್​ ಐಡಿಗೆ ಆಧಾರ್ ಕಾರ್ಡ್ ಲಿಂಕ್​​ ಮಾಡುವ ಮಸೂದೆಗೆ ಇಂದು ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು, ಚುನಾವಣಾ ಕಾನುನು(ತಿದ್ದುಪಡಿ) ಮಸೂದೆ ಮಂಡಿಸಿದರು. ಮಂಡನೆ ವೇಳೆ ಇನ್ಮುಂದೆ ವೋಟರ್​ ಐಡಿಗೆ ಆಧಾರ್​​ ಲಿಂಕ್ ಮಾಡಬಹುದು ಎಂದರು.

READ ALSO

ಇನ್ನು, ಚುನಾವಣಾ ಕಾನುನು(ತಿದ್ದುಪಡಿ) ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಯ್ತು. ಬಳಿಕ ಧ್ವನಿ ಮತದ ಮೂಲಕ ಬಿಲ್​​​ ಪಾಸ್​ ಮಾಡಲಾಯ್ತು.

ಮತದಾರರು ವೋಟರ್ ಐಡಿಗೆ ಇನ್ಮುಂದೆ ಆಧಾರ್ ಸಂಖ್ಯೆ ಜೋಡಿಸಬಹುದು. ವೋಟರ್​​ ಐಡಿಗೆ ಆಧಾರ್​​ ಲಿಂಕ್​ ಮಾಡುವುದರಿಂದ ಮತದಾರರಿಗೆ ಹಲವು ಪ್ರಯೋಜನಗಳು ಇವೆ ಎಂದು ಕೇಂದ್ರ ತಿಳಿಸಿದೆ.

ವೋಟರ್​​ ಐಡಿಗೆ ಆಧಾರ್​​ ಲಿಂಕ್​​ ಮಾಡೋದು ಹೀಗೆ..

1) ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ವೋಟರ್ಸ್​​ ಪೋರ್ಟಲ್​ಗೆ ಭೇಟಿ ನೀಡಿ : https://voterportal.eci.gov.in

2) ನಿಮ್ಮ ಮೊಬೈಲ್​ ನಂಬರ್ ಅಥವಾ ಇ-ಮೇಲ್ ಐಡಿ ಬಳಸಿ ರೆಜಿಸ್ಟರ್ ಮಾಡಿಕೊಳ್ಳಿ
3) ನಂತರ ನಿಮ್ಮ ಮೊಬೈಲ್/ವೋಟರ್ ಐಡಿ ನಂಬರ್/ ಇ-ಮೇಲ್ ಐಡಿ ಬಳಸಿ ಲಾಗಿನ್ ಆಗಿ
4) ತದನಂತರ ನಿಮ್ಮ ಆಧಾರ್ ನಂಬರ್ ಅನ್ನು ಎಂಟ್ರಿ ಮಾಡಿ
5) ಇದಾದಮೇಲೆ ಎರಡೂ ಐಡಿಗಳನ್ನು ಸಬ್​ಮಿಟ್ ಮಾಡಿ..