ಬೆಳ್ತಂಗಡಿ ತಾಲೂಕಿನಾದ್ಯಂತ 8000 ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ನವಚೇತನ ಟ್ರಸ್ಟ್ ಬೆಂಗಳೂರು

ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ (ರಿ.) ಕಾನರ್ಪ, ಕಡಿರುದ್ಯಾವರ ಮತ್ತು ಸೇವಾಭಾರತಿ ಟ್ರಸ್ಟ್ (ರಿ.) ಕನ್ಯಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ‌ಶಾಲೆ ಕೋಡಿಯಾಲಬೈಲು ಇದರ ಸಂಯುಕ್ತ ಆಶ್ರಯದಲ್ಲಿ ನವಚೇತನ ಟ್ರಸ್ಟ್ ಬೆಂಗಳೂರು ಇವರ ಕೊಡುಗೆಯ ಬರಹ ಪುಸ್ತಕಗಳ ವಿತರಣಾ ಕಾರ್ಯಕ್ರಮ ಕೋಡಿಯಾಲಬೈಲು ಶಾಲಾ ವಠಾರದಲ್ಲಿ ಜರುಗಿತು. ಶಾಲೆಯ 109 ಮಕ್ಕಳಿಗೆ ಬರಹ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್ .ಡಿ.ಎಮ್ ಕಾಲೇಜಿನ ಸ್ನಾತಕೋತ್ತರ ಅಧ್ಯಯನದ ಮನಃಶಾಸ್ತ್ರ ವಿಭಾಗದ ಉಪನ್ಯಾಸಕರಾದ ಕುಮಾರಿ ಅಶ್ವಿನಿ ಶೆಟ್ಟಿ ಯವರು ಸೇರಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮೊಬೈಲ್ ‌ನಿಂದ ಅಗುತ್ತಿರುವ ದುಷ್ಪರಿಣಾಮ ಹಾಗೂ ಪೋಷಕರು ತಮ್ಮ ಮಕ್ಕಳ ಜೊತೆ ವ್ರದ್ದಿಸಬೇಕಾದ ಸಂಬಂಧಗಳ ಬಗ್ಗೆ ವಿವರವಾದ ಮಾರ್ಗದರ್ಶನ ಮಾಡಿದರು.

READ ALSO

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷರಾದ ಶ್ರೀ ಕೆ ವಿನಾಯಕ ರಾವ್ ಅವರು ಸಮಾಜದಲ್ಲಿ ಪರೋಪಕಾರ ಗುಣವನ್ನು ಮಕ್ಕಳಲ್ಲಿ ವ್ರದ್ದಿಸುವುದು ಪೋಷಕರ ಜವಬ್ದಾರಿ ಮತ್ತು ಸಮಾಜದಲ್ಲಿ ವಿಶೇಷ ಚೇತನರಾಗಿ ನವಚೇತನ ಟ್ರಸ್ಟ್ ನ ಮಂಜುನಾಥ ಅವರ ಸಾಧನೆಯ ಬಗ್ಗೆ ವಿವರಿಸಿ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಯ 8000 ಮಕ್ಕಳಿಗೆ ಉಚಿತ ಬರಹ ಪುಸ್ತಕ ವಿತರಣೆ ಮಾಡಿರುತ್ತಾರೆ ಹಾಗೂ ಕರ್ನಾಟಕ ರಾಜ್ಯಾಂದ್ಯಂತ ಸುತ್ತಿ ಬಡ ಮಕ್ಕಳಿಗೆ ಪುಸ್ತಕ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್ .ಡಿ .ಎಮ್ .ಸಿ ಅಧ್ಯಕ್ಷರಾದ ಶ್ರೀ ಲಕ್ಷಣ ಗೌಡ, ಚಿರಂಜೀವಿ ಯುವಕ ಮಂಡಲ ಅಧ್ಯಕ್ಷರಾದ ಶ್ರೀ ಜನಾರ್ದನ ಕಾನರ್ಪ , ಸೇವಾ ಭಾರತೀಯ ಕಾರ್ಯದರ್ಶಿ ಶ್ರೀಮತಿ ಸ್ವರ್ಣ ಗೌರಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಿಲೋಮಿನಾ ಸಿ.ಜೆ , ನೆಹರು ಯುವ ಕೇಂದ್ರ ಪ್ರತಿನಿಧಿ ಶ್ರೀ ಸಾಂತಪ್ಪ ಕಲ್ಮಂಜ , ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ವೆಂಕಟೇಶ್, ಉಪಸ್ಥಿತಿರಿದ್ದರು
ಸಹ ಶಿಕ್ಷಕರಾದ ಜಯದೇವ್ ರವರು ಕಾರ್ಯಕ್ರಮ ನಿರೂಪಿಸಿ ಶ್ರೀ ಜಯರಾಜ್ ಸಾಲಿಯಾನ್ ವಂದಿಸಿದರು.