
ಮಂಗಳೂರು: ವಿದ್ಯುತ್ ಸರಬರಾಜು ಕಂಪನಿಯು ತನ್ನ ಬಿಲ್ಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಾರಿ ಮಾರ್ಪಾಡು ಮಾಡಿ P&G ಹೆಸರಿನಲ್ಲಿ 0.36 surcharge ಮಾಡುತ್ತಿದ್ದು ಬಳಕೆದಾರರು ಈ ಬಗ್ಗೆ ಅರಿವಿಲ್ಲದೇ ವಿದ್ಯುತ್ ಬಿಲ್ ಪಾವತಿ ಮಾಡುತ್ತಾ ಬಂದಿದ್ದು ಕಳೆದ ಎರಡು ಮೂರು ತಿಂಗಳುಗಳಿಂದ ಈ ಬಿಲ್ಲುಗಳನ್ನು ಪರಿಶೀಲಿಸಿದ ಗ್ರಾಹಕರೊಬ್ಬರಿಗೆ ಈ ಹೊಸ ವಿಷಯ ಗಮನಕ್ಕೆ ಬಂದಿದೆ.
ಮೊದಲು PF & grachvity ಎಂದು ಹಾಕಿದ್ದು ಇದೀಗ ಇದನ್ನು P&G ಎಂದು ನಮೂದಿಸಿದ್ದಾರೆ. 212ಯುನಿಟ್ ವಿದ್ಯುತ್ ಬಳಕೆ ಮಾಡಿದ ವ್ಯಕ್ತಿ ಒಂದು ಯುನಿಟ್ ಗೆ 5.80ರಂತೆ 1229.60/- ನಿಗದಿತ ಶುಲ್ಕ 290/- ಹಾಗೂFuel and Power Purchase Cost Adjustment ಶುಲ್ಕ 212×0.33=69.96 ಮತ್ತು P & G ಶುಲ್ಕ 212× 0.36 =76.32 Tax 110.66 ಒಟ್ಟು 1776.54/- ಪಾವತಿ ಮಾಡಬೇಕು ಎಂದು ಬಿಲ್ಲಿನಲ್ಲಿ ಉಲ್ಲೇಖ ಇದೆ. ಆದರೆ P&G ಶುಲ್ಕ ಯಾವುದೆಂದು ಗ್ರಾಹಕರಿಗೆ ಆಶ್ಚರ್ಯಕರ ವಿಷಯವಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಸೂಕ್ತ ಸ್ಪಷ್ಟೀಕರಣವನ್ನು ನೀಡುವ ಅವಶ್ಯಕತೆ ಇದೆ.