TRENDING
Next
Prev

ಮುಷ್ಕರ ನಿರತ ಸಾರಿಗೆ ನೌಕರರಿಗೆ ಸರ್ಕಾರದಿಂದ ಬಿಗ್ ಶಾಕ್ : 8 ನೌಕರರ ಮೇಲೆ “ಎಸ್ಮಾ” ಕಾಯ್ದೆ ಪ್ರಯೋಗ!

ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು, ಕರ್ತವ್ಯಕ್ಕೆ ಹಾಜರಾದ ನೌಕರರ ಕೆಲಸಕ್ಕೆ ಅಡ್ಡಿಪಡಿಸುವ ಹಾಗೂ ಬಸ್ ಗಳ ಮೇಲೆ ದಾಳಿ ಮಾಡುವವರ ವಿರುದ್ಧ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಮತ್ತು ಕೆಸ್ಮಾ (ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಪ್ರಯೋಗಿಸಿದೆ.

ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಮುಷ್ಕರ ಆರಂಭಿಸಿದ ಕಾರಣಕ್ಕಾಗಿ ಕಾರ್ಮಿಕ ಇಲಾಖೆ ನೌಕರರ ಮುಷ್ಕರ ಅಕ್ರಮ ಎಂದು ಹೇಳಿತ್ತು. ಇದರಿಂದಾಗಿ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಸರ್ಕಾರ ಅಧಿಕಾರ ದೊರೆಂತಾಗಿತ್ತು. ಇದೀಗ ರಾಜ್ಯ ಸರ್ಕಾರ 8 ನೌಕರರ ವಿರುದ್ಧ ಎಸ್ಮಾ ಹಾಗೂ 91 ಸಿಬ್ಬಂದಿ ವಿರುದ್ಧ ಕೆಸ್ಮಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದು, 23 ಜನರನ್ನು ಬಂಧಿಸಿದೆ.

READ ALSO

ಎಸ್ಮಾ ಅಥವಾ ಕೆಸ್ಮಾ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಕನಿಷ್ಠ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಬಹುದು ಎನ್ನಲಾಗಿದೆ.