ಪಿಂಕ್ ವಾಟ್ಸಾಪ್ ಲಿಂಕ್ ಒತ್ತುವ ವಾಟ್ಸಾಪ್ ಬಳಕೆದಾರರೇ ಎಚ್ಚರ! ಸದ್ದಿಲ್ಲದೇ ಎಂಟ್ರಿಯಾಗುತ್ತೇ ವಾಟ್ಸಾಪ್ ಲಿಂಕ್ ವೈರಸ್!

ವಾಟ್ಸಪ್ ಜಾಲತಾಣದಲ್ಲಿ ಹೊಸ ಲಿಂಕ್ ಒಂದು ಪಿಂಕ್ ಬಣ್ಣದ ಸಿಂಬಲ್ ಜೊತೆಗೆ ಪಿಂಕ್ ವಾಟ್ಸಪ್, ನ್ಯೂ ವರ್ಶನ್ ಹೆಸರಿನಲ್ಲಿ ಹರಿದಾಡುತಿದ್ದು ಈ ಲಿಂಕ್ ಒತ್ತಿದ ಅದೆಷ್ಟೋ ಮಂದಿ ಹೊಸ ಅವತಾರ ಕಂಡು ಬೆಚ್ಚಿ ಬಿದ್ದಿದ್ದಾರೆ.

ಲಿಂಕ್ ಒತ್ತಿದ ಕೂಡಲೇ ತನ್ನಷ್ಟಕ್ಕೇ ಅವರ ಹೆಸರಲ್ಲಿ ಅದೇ ಲಿಂಕ್ ಫಾರ್ವರ್ಡ್ ಆಗುತ್ತಿದೆ ಯಾರ ಜೊತೆಗೆಲ್ಲಾ ವಾಟ್ಸಪ್ ಕನೆಕ್ಷನ್ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ಲಿಂಕ್ ತನ್ನಿಂದ ತಾನೇ share ಆಗುತ್ತಿದ್ದು ಪಿಂಕ್ ಹೆಸರಲ್ಲಿ ಯಾರೋ ಮಾಂತ್ರಿಕ ನಕಲಿ ಲಿಂಕ್ ಬಿಟ್ಟು ಯಾಮಾರಿಸಿದ್ದಾರೆ.

READ ALSO

ಈ ಲಿಂಕ್ ತನ್ನಿಂದ ತಾನೇ ಒತ್ತಿದ ವ್ಯಕ್ತಿ ಎಷ್ಟು ಗ್ರೂಪ್ ಗಳಲ್ಲಿ ಸದಸ್ಯರಾಗಿದ್ದಾರೆ ಮತ್ತು ಅವರ ಜೊತೆ ವೈಯಕ್ತಿಕವಾಗಿ ಯಾರೆಲ್ಲ ಲಿಂಕ್ ಹೊಂದಿದ್ದಾರೆ ಅವೆರಲ್ಲರಿಗೂ ಈ ಲಿಂಕ್ ಹೋಗ್ತಾ ಇತ್ತು. ಹೊಸ ವರ್ಷನ್ ಏನೋ ಇರಬೇಕು ಎಂದು ಹೊಸ ವ್ಯಕ್ತಿ ಅದನ್ನು ಒತ್ತಿದ ಕೂಡಲೇ ಅದು ಮತ್ತೆ ಎಲ್ಲರ ಜೊತೆಗೂ ಹಂಚಿಕೆ ಆಗ್ತಾ ಇತ್ತು. ಇದು ಹೊಸ ರೀತಿಯ ವೈರಸ್ ಆಗಿದ್ದು ವಾಟ್ಸಪಲ್ಲಿ ಕುಟ್ಟುತ್ತಾ ಇರುವ ಶೂರರೆಲ್ಲಾ ಈ ಲಿಂಕಾಸುರನ ಕೂಪಕ್ಕೆ ಸಿಲುಕಿ ಕೆಲಕಾಲ ಒದ್ದಾಡಿದ್ದಾರೆ.  

ಕೆಲವರಂತೂ ಈ ಲಿಂಕ್ ವೈರಸ್ ಅನ್ನೋದು ಗೊತ್ತಾಗುತ್ತಲೇ ಮತ್ತೆ ಡಿಲೀಟ್ ಬಟನ್ ಒತ್ತಲು ಆರಂಭಿಸಿದ್ದಾರೆ. ಆದರೆ, ಒಮ್ಮೆ ಒತ್ತಿದರೆ ಮುಗೀತು ಕ್ಷಣಾರ್ಧದಲ್ಲಿ ಸಾವಿರಾರು ಮಂದಿಗೆ ಲಿಂಕ್ ಹಂಚಿಕೆಯಾಗಿರುತ್ತೆ. ಸಾವಿರಾರು ಮಂದಿ ಈ ಲಿಂಕ್ ಕೂಪಕ್ಕೆ ಒದ್ದಾಡುವಂತಾಗಿದೆ.

ಗೂಗಲಲ್ಲಿ surch ಮಾಡಿದರೆ, ಪಿಂಕ್ ವಾಟ್ಸಪ್ ಅನ್ನೋ ಕಾನ್ಸಪ್ಟ್ ಇದೆಯಂತೆ. ಒಂದೇ ಮೊಬೈಲಲ್ಲಿ ಎರಡು ರೀತಿಯಲ್ಲಿ ವಾಟ್ಸಪ್ ಬಳಕೆಗೆ ಅನುವು ಮಾಡುವ App ಒಂದೇ ನಂಬರಿನಲ್ಲಿ ಎರಡು ಬಗೆಯಲ್ಲಿ ವಾಟ್ಸಪ್ ಬಳಕೆ ಮಾಡಿಕೊಳ್ಳಲು ಪಿಂಕ್ ವಾಟ್ಸಪ್ ಬಳಕೆ ಮಾಡಬಹುದು ಎಂದಿದೆ. ಆದರೆ, ಈ ಪಿಂಕ್ ವಾಟ್ಸಪ್ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ವೈರಸ್ ಲಿಂಕನ್ನೇ ತೆರೆದು ಹರಿಯಬಿಟ್ಟಿದ್ದಾರೆ. 

ಆದ್ದರಿಂದ ಇಂತಹ ಲಿಂಕ್ ಒತ್ತಿ ಯಾಮಾರೋ ಮೊದಲು ಹುಷಾರಾಗಿರಿ ಇಂತಹ ಲಿಂಕ್ ಇದಲ್ಲಿ ತಕ್ಷಣವೇ ಡಿಲೀಟ್ ಮಾಡಿ ಈ ಲಿಂಕ್ play storeನಲ್ಲಿ uninstall ಮಾಡಲು ಸಾಧ್ಯವಿಲ್ಲ ಇದನ್ನು setting ನಲ್ಲಿ App setting ಹೋಗಿ ನಿಮ್ಮ ಮೊಬೈಲ್ ನಿಂದ ಇದನ್ನು ಹೊರ ಹಾಕಬಹುದಾಗಿದೆ. ಇತರರಿಗೆ ಈ ಲಿಂಕ್ ಹಂಚದೇ ಇರೋದು ಉತ್ತಮವಾಗಿದೆ.