ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ “ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮವು ಡಿ. 30ರಂದು ನಡೆಯಿತು. ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಏನು? ಯಾಕೆ? ಹೇಗೆ? ಎಂಬ ವಿಷಯದಲ್ಲಿ ಪರೀಕ್ಷಾ ಸಿದ್ಧತೆಯ ಕುರಿತು ಒಂದು ದಿನದ ತರಬೇತಿ ಕಾರ್ಯವನ್ನು ಕಾರ್ಯಗಾರವನ್ನು ನಡೆಸಲಾಯಿತು.
ವಿದ್ಯಾರ್ಥಿಗಳ ಪೋಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರ ಎಂಬ ವಿಷಯದಲ್ಲಿ ತರಬೇತಿಯನ್ನು ನೀಡಲಾಯಿತು.
ಈ ತರಬೇತಿಯನ್ನು ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಶ್ರೀ ಕೃಷ್ಣಮೂರ್ತಿ ಟಿ ನಡೆಸಿಕೊಟ್ಟರು. ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಭಯವಿಲ್ಲದೆ, ಆತ್ಮವಿಶ್ವಾಸದಿಂದ, ಸತತ ಪ್ರಯತ್ನ, ದೃಢ ಚಿತ್ತದಿಂದ ಎದುರಿಸಿ ಯಶಸ್ವಿಯಾಗಿ ಇಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ಶ್ರೀ ಜಯರಾಮ ಮಯ್ಯ ಪ್ರಸ್ತಾವಿಸಿ, ಶಿಕ್ಷಕರಾದ ಕೋಕಿಲ ಕೆ ಮತ್ತು ಕಿರಣ್ ಸಂಯೋಜಿಸಿ, ಸಹಕರಿಸಿದ್ದರು.




