ಕಾನರ್ಪ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ರವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಶ್ರೀ ರಾಮಾಂಜನೇಯ ದೇವಸ್ಥಾನ ಆಂಜನೇಯ ಬೆಟ್ಟ ಕಾನರ್ಪ ಕಡಿರುದ್ಯಾವರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಬೆಳ್ತಂಗಡಿ ಪ್ರದೇಶದಲ್ಲಿ, ಎಕ್ಸೆಲ್ ಪ್ರಿ-ಯೂನಿವರ್ಸಿಟಿ ಕಾಲೇಜು (Excel PU College) ಸ್ಥಾಪಿಸಿ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದು ಬಡತನದಲ್ಲಿ ಬೆಳೆದು ಬಂದ ಇವರು, ಶಿಕ್ಷಣದ ಮೂಲಕ ಕ್ರಾಂತಿ ಮಾಡುವ ಕನಸು ಕಂಡಿದ್ದು, ಇವರ ಸೇವೆಯನ್ನು ಗುರುತಿಸಿ ವಿಜಯರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಧರ ಬಿಡೆ, ಪಿತಾಂಬರ ಹೇರಾಜೆ, ಬಾಬು ಪೂಜಾರಿ ಕೂಳೂರು, ಫಿಲೋಮಿನಾ ಸಿ.ಜೆ, ವಿಶ್ವನಾಥ ಶೆಟ್ಟಿ ಮುಂಡಾಜೆ, ಬಿ.ಕೆ ಗೋವಿಂದ ದುಂಬೆಟ್ಟು, ರಾಜೇಶ್ ಗೌಡ ಹೇಡ್ಯ, ಕಿಶೋರ್ ಕುಮಾರ್, ಕಿರಣ್ ಕುಮಾರ್ ಉಪಸ್ಥಿತರಿದ್ದರು.






