ಶುಕ್ರವಾರದ ರಾಶಿಫಲ: ಯಾರಿಗಿದೆ ಇಂದು ಶುಭಫಲ

ಮೇಷ

ನಿಮ್ಮ ಅಹಂ, ಪ್ರತಿಷ್ಠೆಗಳು ಏಳಿಗೆಗೆ ಅಡ್ಡಗಾಲಾಗುವ ಸಾಧ್ಯತೆ. ಸಾತ್ವಿಕ ನಡವಳಿಕೆಯನ್ನು ರೂಢಿಸಿಕೊಂಡು ಆಗಬಹುದಾದ ನಷ್ಟವನ್ನು ತಪ್ಪಿಸಿಕೊಳ್ಳಿ. ಆದಾಯದಲ್ಲಿ ಅನುಕೂಲ.

READ ALSO

ವೃಷಭ

ಸಾರಾಸಾರ ಯೋಚಿಸಿ ತೆಗೆದುಕೊಂಡ ನಿರ್ಧಾರ ನಿಮ್ಮ ಅಗತ್ಯತೆಗಳನ್ನು ಪೂರೈಸಲಿದೆ. ಆದಾಯವು ಹಂತ ಹಂತವಾಗಿ ವೃದ್ಧಿಯಾಗುವುದರಿಂದ ಯಾವುದೇ ಆತಂಕಕ್ಕೆ ಕಾರಣವಿಲ್ಲ.

ಮಿಥುನ

ನಿಮ್ಮ ಬಹುದಿನಗಳ ಕನಸಿಗೊಂದು ಉತ್ತಮ ಚಾಲನೆ ದೊರಕುವುದು. ಯಶಸ್ಸಿನ ಹಾದಿಯಲ್ಲಿ ಸಾಗುವಿರಿ. ಯೋಜಿತ ವ್ಯವಹಾರದಲ್ಲಿ ಬಂಡವಾಳ ವೃದ್ಧಿಯಾಗಲಿದೆ. ಉತ್ತಮ ದಿನವಾಗುವುದು.

ಕಟಕ

ವ್ಯವಹಾರದಲ್ಲಿ ಆತುರತೆ ನಷ್ಟಕ್ಕೆ ದಾರಿಯಾಗುವ ಸಾಧ್ಯತೆ. ಹಿತೈಷಿಗಳೊಂದಿಗೆ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ವ್ಯವಹರಿಸಿ. ಸಮಾಧಾನ ಒಳಿತಿಗೆ ದಾರಿಯಾಗುವುದು.

ಸಿಂಹ

ಹಣಕಾಸಿನ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಬೇರೊಂದು ಮಾರ್ಗವನ್ನು ಅನುಸರಿಸಲಿದ್ದೀರಿ. ಗೌರವಾನ್ವಿತ ಯೋಗ್ಯ ವ್ಯಕ್ತಿಗಳ ಸಾಂಗತ್ಯದಿಂದಾಗಿ ಸಂತೋಷವನ್ನು ಪಡೆಯಲಿದ್ದೀರಿ.

ಕನ್ಯಾ

ನಿಮ್ಮ ಮಿತಿಯನ್ನರಿತು ಮಾಡಿದ ವ್ಯವಹಾರಗಳು ಅನುಕೂಲಕರವಾಗಿ ಆದಾಯ ತರಲಿದೆ. ವ್ಯವಹಾರದಲ್ಲಿನ ಭಯ ನಿವಾರಣೆಯಾಗಿ ಉತ್ತೇಜನವನ್ನು ಪಡೆಯುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

ತುಲಾ

ಅನಿರೀಕ್ಷಿತ ಸಹಾಯ ದೊರಕುವುದರ ಮೂಲಕ ಅನುಕೂಲಕರ ಬೆಳವಣಿಗೆಯನ್ನು ಕಾಣುವಿರಿ. ಕೈಗೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದಲಿದ್ದೀರಿ. ವಿದ್ಯಾಭ್ಯಾಸಕ್ಕೆ ಉತ್ತಮ ಚಾಲನೆ ದೊರಕುವುದು.

ವೃಶ್ಚಿಕ

ಸರಳ ಮತ್ತು ಅಚ್ಚುಕಟ್ಟುತನದ ವ್ಯವಹಾರದಿಂದಾಗಿ ದುಗುಡಗೊಂಡಿದ್ದ ಮನಸ್ಸಿಗೆ ನೆಮ್ಮದಿಯು ದೊರಕಲಿದೆ. ಸಂಗಾತಿಯೊಂದಿಗಿನ ಮನಸ್ತಾಪ ಶಮನವಾಗಿ ಸುಖ ಜೀವನ ನಿಮ್ಮದಾಗಲಿದೆ.

ಧನು

ನಿಮ್ಮ ಯೋಜಿತ ಮಾರ್ಗವನ್ನು ಸಮರ್ಥಿಸಿಕೊಳ್ಳುವಿರಿ. ಉತ್ತಮ ಬೆಂಬಲ ದೊರಕುವುದು. ಅನುಕೂಲಕರ ಪ್ರಯಾಣದಲ್ಲಿ ಉತ್ತಮ ಸಾಧನೆ ನಿಮ್ಮದಾಗಲಿದೆ.

ಮಕರ

ಆರ್ಥಿಕ ಚಟುವಟಿಕೆಯಲ್ಲಿ ನಿಮ್ಮ ಗಮನಕ್ಕೆ ಬಾರದಂತೆ ಉತ್ತಮ ಆದಾಯವನ್ನು ಗಳಿಸಲಿದ್ದೀರಿ. ಚಿಂತೆಯಿಂದ ಮಕ್ತರಾಗಿ ಲವಲವಿಕೆಯ ದಿನವನ್ನಾಗಿಸಿಕೊಳ್ಳುವಿರಿ. ಶುಭ ಸಮಾಚಾರ ಕೇಳುವಿರಿ.

ಕುಂಭ

ಹಿರಿಯರ ಸಹಾಯದಿಂದ ಉನ್ನತ ಸಾಧನೆಯನ್ನು ಮಾಡಲಿದ್ದೀರಿ. ವಿವಿಧ ಮೂಲಗಳಿಂದ ಉತ್ತಮ ಆದಾಯವನ್ನು ಪಡೆಯಲಿದ್ದೀರಿ. ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಮೀನ

ಸೋಲಿಲ್ಲದ ಮುನ್ನಡೆಯ ಮಾರ್ಗದಲ್ಲಿ ಕಾರ್ಯ ಚಟುವಟಿಕೆಗಳು ವೃದ್ಧಿಯಾಗಲಿವೆ. ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ.