ಬೆಳ್ತಂಗಡಿ: ಫ್ರೆಂಡ್ಸ್ ವ್ಯಾಟ್ಸಾಪ್ ಗ್ರೂಪ್ ನ 13ವರ್ಷಗಳ ನಂತರ ಮೊದಲ ಬಾರಿಗೆ ಸ್ನೇಹಿತರನ್ನೆಲ್ಲ ಒಗ್ಗೂಡಿಸಿ ಫ್ರೆಂಡ್ಸ್ ಸಮಾಗಮ -2025 ಕಾರ್ಯಕ್ರಮವನ್ನು ತಾಲೂಕಿನ ಬಲಿಪ ರೆಸಾರ್ಟ್ ನಲ್ಲಿ ನಡೆಸಲಾಯಿತು.

2013ರಲ್ಲಿ ಪ್ರಾರಂಭಗೊಂಡ ಈ ಗ್ರೂಫ್ ನಲ್ಲಿ ವಕೀಲರು, ಉಪನ್ಯಾಸಕರು, ಇಲಾಖಾ ಅಧಿಕಾರಿಗಳು, ಪ್ರಗತಿಪರ ಕೃಷಿಕರು, ಲೇಖಕರು, ಉದ್ಯಮಿಗಳು, ಸಮಾಜ ಸೇವಕರು,ಸಂಘಟನಾ ಚತುರರು, ವೈದ್ಯರು, ಛಾಯಾಗ್ರಾಹಕರು, ಪತ್ರಕರ್ತರು, ಸಾಹಿತಿಗಳು
ಪರಿಸರಸ್ನೇಹಿ ತಜ್ಞರು ಸೇರಿದಂತೆ ಸಮಾನ ಮನಸ್ಕರನ್ನೊಳಗೊಂಡು ಈ ಗ್ರೂಫ್ ನಲ್ಲಿ ಹರಟೆ,ಹಾಡು, ಮನರಂಜನೆ, ಜೊತೆಗೆ ಸಾಮಾಜಿಕ ಕಳಕಳಿಯ ಬಹಳಷ್ಟು ಕೆಲಸಗಳು ಆಗುತ್ತಿದ್ದು ಸಮಾಜದ ಪ್ರತಿಯೊಂದು ಆಗು ಹೋಗುಗಳ ಬಗ್ಗೆ ಚರ್ಚೆ ವಿಮರ್ಶೆ ಪರಿಹಾರಗಳು ನಡೆಯುತ್ತಿರುವ ವಿಶೇಷ ಗ್ರೂಫ್ ಇದಾಗಿದೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆ: “ಪುಸ್ತಕ ಸಂತೆ”
ಫ್ರೆಂಡ್ಸ್ ಸಮಾಗಮ 2025ರಲ್ಲಿ ವಿಶೇಷವಾಗಿ ಆಕರ್ಷಣೆಗೊಂಡಿದ್ದು ಪುಸ್ತಕ ಸಂತೆ ಸುಮಾರು 800ಕ್ಕೂ ಅಧಿಕ ಪುಸ್ತಕಗಳು ಈ ಕಾರ್ಯಕ್ರಮದಲ್ಲಿ ಸೇರಿದ್ದು ಇವುಗಳನ್ನು ಆಯ್ದ ಸರಕಾರಿ ಶಾಲೆಗಳಿಗೆ ನೀಡುವ ಚಿಂತನೆ ಬಹಳ ವೈಶಿಷ್ಟ್ಯವಾಗಿದೆ. ಡಿಜಿಟಲ್ ಯುಗದಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಮಾತನ್ನು ಸುಳ್ಳು ಎಂದು ಮಾಡಿದ ಈ ಪುಸ್ತಕ ಸಂತೆ ಮತ್ತೆ ಓದಿನ ಕಡೆ ಸ್ನೇಹಿತರ ಮನಸ್ಸನ್ನು ಕೇಂದ್ರೀಕರಿಸಿದೆ ಇದು ಕೇವಲ ಸಮಾಗಮಕ್ಕೆ ಮಾತ್ರವಲ್ಲ ಸಮಾಜಕ್ಕೆ ಮಾದರಿಯಾಗಿದೆ.

ಲಕ್ಷ್ಮೀಮಚ್ಚಿನರಿಗೆ “ಫ್ರೆಂಡ್ಸ್” ಅಭಿಮಾನದ ಸಮ್ಮಾನ

ಪತ್ರಕರ್ತ, ಲೇಖಕ ಹಾಗೂ ಫ್ರೆಂಡ್ಸ್ ವಾಟ್ಸಾಪ್ ಗ್ರೂಪ್ ನ ಮುಖ್ಯಸ್ಥರಾಗಿ ಕಳೆದ 13ವರ್ಷಗಳಿಂದ ಸ್ನೇಹಿತರೆಲ್ಲರನ್ನು ಒಗ್ಗೂಡಿಸಿಕೊಂಡು ಬಂದಿರುವ ಲಕ್ಷ್ಮೀ ಮಚ್ಚಿನರವರಿಗೆ ವಿಶಿಷ್ಟವಾಗಿ ಸಮ್ಮಾನ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಫನ್ನಿ ಗೇಮ್ಸ್ ನಡೆಸಲಾಯಿತು ಸೇರಿದ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಗೋಪಾಲಕೃಷ್ಣ ಭಟ್ ಉಜಿರೆ, ಪುಷ್ಪರಾಜ್ ಶೆಟ್ಟಿ, ಲಕ್ಷ್ಮೀ ಮಚ್ಚಿನ, ಅಚ್ಚು ಮುಂಡಾಜೆ, ವೀರೇಂದ್ರ ಜೈನ್, ಡಾ. ಸತ್ಯನಾರಾಯಣ ಭಟ್, ಸಂಪತ್ ಬಿ. ಸುವರ್ಣ, ಸುದರ್ಶನ್ ರಾವ್ ಗಜಂತೋಡಿ, ಸುದರ್ಶನ್ ಕನ್ಯಾಡಿ, ಶೈಲೇಶ್ ಉಜಿರೆ, ಗುರುಪ್ರಸಾದ್ ಮುಂಡಾಜೆ, ಗುರುರಾಜ್ ಪಣಿಯಾಡಿ, ರಾಜೇಶ್ ಕಾನರ್ಪ , ನವೀನ್ ಬಿ.ಕೆ, ಮಾಧವ ಹೊಳ್ಳ, ಕೃಷ್ಣ ಮೂರ್ತಿ ಹೆಬ್ಬಾರ್ , ಶಿತಿಕಂಠ ಭಟ್ ಉಜಿರೆ, ದಾಮೋದರ ದೊಂಡೊಲೆ, ರಾಘವ ಶರ್ಮ, ಸದಾಶಿವ ಕೆ, ಜಿ.ಕೃಷ್ಣ ಬೆಳ್ತಂಗಡಿ, ಅರಿಹಂತ್ ಜೈನ್, ಶೈಲೇಶ್ ಆರ್ ಜೆ, ರಾಮಕೃಷ್ಣ ಭಟ್, ಕೃಷ್ಣ ನಾಯ್ಕ್ , ಪ್ರಕಾಶ್ vk ಕಣಿಯೂರು, ರೂಪೇಶ್ ಧರ್ಮಸ್ಥಳ, ಶಿವಕುಮಾರ್ ಎಸ್.ಎಂ., ಶ್ರೀನಿವಾಸ ನಾಯಕ್ ಇಂದಾಜೆ, ಸುಭಾಶ್ಚಂದ್ರ ರೈ ಅಳದಂಗಡಿ, ಅಶೋಕ್ ಜೈನ್, ಗೋಪಾಲಕೃಷ್ಣ ಬೆಳ್ತಂಗಡಿ , ಡಿ.ಪ್ರಶಾಂತ್ ಬಳಂಜ, ಮನೋಹರ್ ಬಳಂಜ, ಪ್ರದೀಶ್ ಮರೋಡಿ, ಸಂದೀಪ್ ಶೆಟ್ಟಿ ಮೊಗೆರೋಡಿ, ನಾಗೇಶ್ ಪೈ, ವೆಂಕಟರಮಣ ಶೆಟ್ಟಿ , ಕೀರ್ತಿ ಮಂಗಳೂರು , ಸುಮಂತ್ ನೆಮ್ಮಾರ್, ಡಾ. ಶಶಿಧರ ಡೊಂಗ್ರೆ, ಶಶಿಕಿರಣ್ ಜೈನ್ , ಪ್ರಸಾದ್ ಶೆಟ್ಟಿ, ಸತೀಶ್ ಮಂಜೇಶ್ವರ, ದೇವಿಪ್ರಸಾದ್ ಬೆಳ್ತಂಗಡಿ, ಗಣೇಶ್ ಬೆಂದ್ರಾಳ, ಪ್ರಕಾಶ್ ಗೇರುಕಟ್ಟೆ, ದಿನೇಶ್ ಹೊಳ್ಳ, ದಯಾ ಕುಕ್ಕಾಜೆ , ಧನಕೀರ್ತಿ ಆರಿಗ, ಸತೀಶ್ ಇರಾ, ಹರೀಶ್ ಮಾಂಬಾಡಿ , ಜಯಂತ್ ಬಾಯಾರ್, ಅಚುಶ್ರೀ ಬಾಂಗೇರು, ತಿರುಮಲೇಶ್, ಶ್ರೀವತ್ಸ, ಸಂದೇಶ್ ಪಿ.ಜಿ, ದಯಾನಂದ ಬೆಳಾಲು, ಪ್ರದೀಪ್ ಹೊಳ್ಳ , ಹರ್ಷಿತ್ ಮಂಗಳೂರು , ಜಿತೇಂದ್ರ ಕುಂದೇಶ್ವರ , ಅಪುಲ್ ಆಳ್ವ, ಚಂದ್ರಶೇಖರ ಅಂತರ, ಹರ್ಷ.ಎ ಪುತ್ತೂರು, ಸುಕೇಶ್ ಕುಮಾರ್ ಶೆಟ್ಟಿ , ರತ್ನವರ್ಮ ಬುಣ್ಣು ಭಾಗವಹಿಸಿದ್ದರು.
ಅಚ್ಚು ಮುಂಡಾಜೆ ಸ್ವಾಗತಿಸಿ, ದಾಮೋದರ ದೊಂಡೊಲೆ ನಿರೂಪಿಸಿ, ರಾಜೇಶ್ ಕಾನರ್ಪ ಧನ್ಯವಾದವಿತ್ತರು.





