
ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು.

ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ ಹೊಸ ಹೊಸ ವಿಧಾನಗಳನ್ನು ಮಾಡು ಮೂಲಕ ಮೋಸಗೊಳಿಸಲು ಸನ್ನದರಾಗಿರುತ್ತಾರೆ ಆದರೆ ನಾವು ಜಾಗೃತರಾದರೆ ಮಾತ್ರ ಇಂತಹ ಮೋಸದ ಜಾಲದಿಂದ ಹೊರಬರಲು ಸಾಧ್ಯವಿದೆ ಅಷ್ಟಕ್ಕೂ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನ kan ₹639 ಫೇಜ್ ನಲ್ಲಿ ಆನೆಯ ಮೇಲೆ ಕ್ಲಿಕ್ ಮಾಡಿ 639 ಪಡೆಯಿರಿ ಎಂಬ ಫೋಟೋ ದೊಂದಿಗೆ ಫೋನ್ ಪೇ ಲಿಂಕ್ ಗಳನ್ನು ಹಾಕಿ ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಎಲ್ಲರಿಗೂ 500 ಉಚಿತ ಬಹುಮಾನ ಎಂಬ ಪೋಸ್ಟರ್ ಅನ್ನು ಹರಿಬಿಟ್ಟು ನಿಮ್ಮ ಖಾತೆಗೆ ಹಣ ಜಮೆಯಾಗಲು ಈ ಕೆಳಗೆ ಕ್ಲಿಕ್ ಮಾಡಿ ಎಂಬ ಸಂದೇಶದೊಂದಿಗೆ ಯುಪಿಐಡಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದ್ದು ಇದನ್ನು ಕ್ಲಿಕ್ ಮಾಡಿದರೆ ನೇರವಾಗಿ ಫೋನ್ ಪೇ ಪಾವತಿಗೆ ಹೋಗುತ್ತದೆ ಗಡಿಬಿಡಿಯಲ್ಲಿ ತಪ್ಪಿ ನಿಮ್ಮ ಪಾಸ್ವರ್ಡ್ ಹಾಕಿದರೆ ನಿಮ್ಮ ಖಾತೆಯಿಂದ ಹಣ ಮಾಯವಾಗುತ್ತದೆ ಇಂತಹ ಮೋಸದ ಲಿಂಕ್ ಗಳ ಬಳಕೆ ಮಾಡುವ ಮುಂದೆ ನಮ್ಮಲ್ಲಿ ನಮಗೆ ಸ್ವಲ್ಪ ಎಚ್ಚರವಿರಲಿ ಜಾಗೃತರಾಗಿ

