ನವದೆಹಲಿ : ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಪಾವತಿ ಅಪ್ಲಿಕೇಶನ್ ಆಗಿರುವ ಪೇಟಿಎಂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪುನಃ ಬಳಕೆದಾರರಿಗೆ ಲಭ್ಯವಾಗಿದೆ ಅಂತ ತಿಳಿಸಿದೆ.
ಜೂಜಾಟ ನೀತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೂಗಲ್ ಪ್ಲೇ ಸ್ಟೋರ್ ಶುಕ್ರವಾರ ತೆಗೆದುಹಾಕಿತ್ತು. ತದ ನಂತರ ಎಲ್ಲವನ್ನೂ ಸರಿ ಮಾಡಿಕೊಂಡಿರುವ ಪೇಟಿಎಂ ಈಗ ಮತ್ತೆ ಎದಿನಂತೆ ಗ್ರಾಹಕರ ಸೇವೆಗೆ ಲಭ್ಯವಾಗಿದೆ.
ಆನ್ ಲೈನ್ ಕ್ಯಾಸಿನೋ ಮತ್ತು ಜೂಜು ಅಥವಾ ಸ್ಪೋರ್ಟ್ಸ್ ಬೆಟ್ಟಿಂಗ್ ಕುರಿತಾದ ಆಯಪ್ ಗಳನ್ನು ಗೂಗಲ್ ಪ್ರೋತ್ಸಾಹಿಸುವುದಿಲ್ಲ. ಇಂತಹ ಆಯಪ್ ಗಳ ಜಾಹೀರಾತು ಅಥವಾ ಲಿಂಕ್ ಹಂಚಿಕೊಳ್ಳುವುದು ಹಾಗೂ ಥರ್ಢ್ ಪಾರ್ಟಿ ಆಯಪ್ ಗಳಿಗೆ ಬಳಕೆದಾರರನ್ನು ಸೆಳೆಯುವುದು ಗೂಗಲ್ ಪಾಲಿಸಿಯ ಉಲ್ಲಂಘನೆಯಾಗುತ್ತದೆ ಎಂದಿತ್ತು ಗೂಗಲ್ ಪ್ಲೇ ಸ್ಟೋರ್.
ಈ ಕಾರಣಕ್ಕಾಗಿ ಪೇಟಿಎಂ ಅಪ್ಲಿಕೇಶನ್ ನನ್ನು ರಿಮೂವ್ ಮಾಡಲಾಗಿತ್ತು. ಪೇಟಿಎಂ ಭಾರತೀಯ ಮೂಲದ ಕಂಪೆನಿ One 97 Communication Ltd. ಮಾಲಿಕತ್ವವನ್ನು ಹೊಂದಿದ್ದು, ವಿಜಯ್ ಶಂಕರ್ ಶರ್ಮಾ ಇದರ ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಚೀನಾದ ಆಲಿಬಾಬ ಗ್ರೂಪ್ ನ ಮಿತ್ರ ಸಂಸ್ಥೆ fintech firm Ant Financials ನಿಂದ ಭಾರೀ ಹಣವನ್ನು ಪಡೆದಿದೆ ಎಂದು ವರದಿಗಳು ಈ ಬೆಳವಣಿಗೆ ಬಳಿಕ ಹರಿದಾಡುತ್ತಿತ್ತು.