ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ತನ್ಮೂಲಕ ಪರೋಕ್ಷವಾಗಿ ಹಿಂದೂ ಸಮಾಜದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಧಾರ್ಮಿಕ ಭಾವನೆಗಳನ್ನು,ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಿತ ರಕ್ಷಣಾ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ವೃಂದಗಳ ವೇದಿಕೆ ಹಾಗೂ ಇನ್ನಿತರ ಸಂಘಸಂಸ್ಥೆಗಳ ಒಕ್ಕೂಟದಿಂದ ಇಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪ್ರತಿಭಟನಾಕಾರರು, ದಕ್ಷಿಣ ಭಾರತದ ಮತ್ತು ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಕನಿಷ್ಠ 800 ವರ್ಷಗಳ ಇತಿಹಾಸ ಹೊಂದಿದ್ದು, ದಕ್ಷಿಣ ಕಾಶಿ ಎಂದೇ ಜನಜನಿತ ವಾಗಿರುತ್ತದೆ. ಈ ಕ್ಷೇತ್ರವು ಕೋಟ್ಯಾಂತರ ಭಕ್ತಾದಿಗಳನ್ನು ಭಾಷೆ ಗಡಿಗಳನ್ನು ಮೀರಿ ಪ್ರತಿನಿತ್ಯ ಮೂವತ್ತರಿಂದ ಐವತ್ತು ಸಾವಿರ ಭಕ್ತರು, ವಿಶೇಷ ದಿನಗಳಲ್ಲಿ ಹೊಂದಿದ್ದು ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಾರೆ ಇಂತಹ ಶ್ರೀಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ನೆಲೆಯೂರಿರುವ ಈ ಪವಿತ್ರ ಸ್ಥಳದ ಹೆಸರನ್ನು ಬಹಳ ಚಾಕಚಕ್ಯತೆಯಿಂದ ಕೇವಲ ಧರ್ಮಸ್ಥಳ ಎಂಬ ಹೆಸರನ್ನೇ ಉಪಯೋಗಿಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿಯವರಿಗೆ ಕಳಂಕ ತರುವಂತಹ, ಪಾವಿತಕ್ಕೆ ಧಕ್ಕೆಯುಂಟು ಮಾಡುವಂತಹ ಕೀಳು ಮಟ್ಟದ ಅಸಾಂವಿಧಾನಿಕ ಭಾಷೆಗಳ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ.ಇದು ಶ್ರೀ ಕ್ಷೇತ್ರದ ತೇಜೋವಧೆ ಮಾಡಲೇಂದೇ ಮಾಡುತ್ತಿರುವ ಷಡ್ಯಂತ್ರ ಎಂದು ದಾರಿಯಲ್ಲಿ ಹೋಗುತ್ತಿರುವ ಶ್ರೀಸಾಮಾನ್ಯರಿಗೂ ತಿಳಿಯಲ್ಪಡುವ ವಿಚಾರವಾಗಿದೆ. ಈ ಬೆಳವಣಿಗೆ ಭಕ್ತರ ಮನಸ್ಸಿಗೆ ಅತೀವವಾದ ನೋವುಂಟು ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತದೆ.

ಅನಾಮಿಕ ಎಂಬ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಸಮಸ್ತ ಭಕ್ತಾದಿಗಳು, ಹಿಂದೂ ಬಾಂಧವರೆಲ್ಲರೂ ಗೌರವದಿಂದ ಸ್ವಾಗತಿಸಿ ತನಿಖೆಯು ಅರ್ಥಪೂರ್ಣವಾಗಬೇಕೆಂದು ಬಯಸುತ್ತೇವೆ. ಆದರೆ ಮಾಧ್ಯಮಗಳ ಪ್ರಕಾರ ಆರನೇ ಗುಂಡಿಯನ್ನು ಬಿಟ್ಟರೆ ಇನ್ನೆಲ್ಲೂ ಸಾಕ್ಷಾಧಾರಗಳು ದೊರಕದಿರುವುದು ಹಾಗೂ ಇತ್ತೀಚಿಗಂತೂ ಪವಿತ್ರವಾದ ಬೆಟ್ಟದ ಬುಡದಲ್ಲೂ ಸಹ ಉತ್ಪನ್ನ ಮಾಡಿದ ನಂತರವೂ ಸಹ ಯಾವ ಸಾಕ್ಷಾಧಾರಗಳು ದೊರಕದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಅನಾಮಿಕನ ಉದ್ದೇಶವೇ ಅನುಮಾನಾಸ್ಪದವಾಗಿ ಕಂಡು ಬರುತ್ತಿರುವುದು ಗೋಡೆಯ ಮೇಲಿನ ಬರಹದಂತೆ ನಿಚ್ಚಳವಾಗಿದೆ ಎಂದರು.ಅನಾಮಿಕನನ್ನು ಮಂಪರು ಪರೀಕ್ಷೆ ಇತ್ಯಾದಿ ಪರೀಕ್ಷೆಗಳ ಮೂಲಕ ಸಂಪೂರ್ಣವಾಗಿ ತನಿಖೆಗೊಳ ಪಡಿಸಬೇಕು ಹಾಗೂ ಆತನ ಬೆಂಬಲಕ್ಕೆ ನಿಂತಿರುವ, ಹಿಂದಿರುವವರ ಬಗ್ಗೆ ಸಹ ಸಂಪೂರ್ಣವಾದ ತನಿಖೆಯನ್ನು ನಡೆಸಬೇಕೆಂದು, ಈ ಬಗ್ಗೆ ತನಿಖಾ ವರದಿಯನ್ನು ಸಾರ್ವಜನಿಕರ ಅನುಮಾನಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ತಿಳಿಸಬೇಕು ಧರ್ಮಾಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಕ್ಷೇತ್ರದ ಪಾವಿತ್ರ ಧಕ್ಕೆ ತರುತ್ತಿರುವವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು, ವಕೀಲರು, ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಸಂಘ-ಸಂಸ್ಥೆಯವರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Spread the love
  • Related Posts

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಸಮೀಪ ಸೆ. 3ರಂದು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಆನೆ ಪ್ರತ್ಯಕ್ಷವಾಗಿ ಆತಂಕ ಉಂಟುಮಾಡಿದ ಘಟನೆ ವರದಿಯಾಗಿದೆ. ಉಜಿರೆ–ಬೆಳಾಲು–ಬಂದಾರು ಮುಖ್ಯ ರಸ್ತೆಯ ಮಿನಂದೇಲು ಬಸ್ ನಿಲ್ದಾಣ ಹಾಗೂ ಡಿ.ಪಿ.…

    Spread the love

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    ಬೆಳ್ತಂಗಡಿ: ಧರ್ಮಸ್ಥಳ- ಕೊಕ್ಕಡ ರಸ್ತೆಯ ಧರ್ಮಸ್ಥಳ ಸಮೀಪದ ಕಲ್ಲೇರಿ ಪರಿಸರದ ಪುದುವೆಟ್ಟು ಕ್ರಾಸ್ ಬಳಿ ಗುರುವಾರ ರಾತ್ರಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಾಡಾನೆ ಹೆದ್ದಾರಿ ಬದಿಯಲ್ಲಿ…

    Spread the love

    You Missed

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 5 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 3 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 5 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 11 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    • By admin
    • August 31, 2026
    • 6 views
    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    • By admin
    • August 27, 2026
    • 9 views
    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ