ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಗೌರವಾನ್ವಿತ ಸಚಿವರಾದ ಶ್ರೀಮತಿ Annapurna Devi ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಕುಮಾರಸ್ವಾಮಿಯವರ ಮನವಿಗೆ ಓಗೊಟ್ಟು ನವದೆಹಲಿಗೆ ಆಗಮಿಸಿದ್ದ ಪ್ರಮುಖರ ಜತೆ ನಡೆದ ಚರ್ಚೆ ಫಲಪ್ರಧವಾಗಿತ್ತು. ಅವರ ಬೇಡಿಕೆಗಳ ಈಡೇರಿಕೆ ಬಗ್ಗೆ ಮಾನ್ಯ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಗೌರವಾನ್ವಿತ ಪ್ರಧಾನಿಗಳಾದ Narendra Modi ಅವರ ಸರ್ಕಾರ ನಿಮ್ಮ ಜತೆಗಿದೆ ಎಂಬ ಭರವಸೆಯನ್ನು ಸಚಿವರು ನೀಡಿದರು.






