ಸಕಲೇಶಪುರ: ಲಯನ್ಸ್ ಇಂಟರ್ ನ್ಯಾಶನಲ್, ಲಯನ್ಸ್ ಕ್ಲಬ್ ಮತ್ತು ಲಿಯೋಕ್ಲಬ್ ಸಕಲೇಶಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸಕಲೇಶಪುರ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು, ಸಂಸ್ಕೃತಿ ಕಾರ್ಡಿಯಾಕ್ ಸೆಂಟರ್ ಹಾಸನ ಇದರ ಸಹಯೋಗದೊಂದಿಗೆ ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಶಾಸಕರಾದ ಸಿಮೆಂಟ್ ಮಂಜುರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ಶುದ್ಧ ನೀರು, ಉತ್ತಮ ಪರಿಸರ, ಶುದ್ಧ ಗಾಳಿ, ಮತ್ತು ಸ್ವಚ್ಛತೆ ಅಗತ್ಯ. ಅಲ್ಲದೆ, ಸಾಮಾಜಿಕ ಸಮಾನತೆ ಕೂಡ ಆರೋಗ್ಯಕ್ಕೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹತ್ತು ಹಲವಾರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸಮಾಜೋನ್ಮುಖಿ ಕೆಲಸಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಇನ್ನಷ್ಟು ಜನಪರ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಜಿತ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರಾಜೇಶ್.ಎಂ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ, ಲಯನ್ಸ್ ಅಧ್ಯಕ್ಷರಾದ ಗಿರೀಶ್ ಮಂಜುನಾಥ್, ಡಾ. ವೈಶಾಕ್ ಭಟ್, ಡಾ.ಅಭಿಷೇಕ್ ಕೃಷ್ಣ, ಡಾ.ಮಧಕರಿ, ಡಾ.ಭೂಷಣ್ ಶೆಟ್ಟಿ, ಡಾ.ಮಧುಸೂದನ್, ಡಾ. ವೈ.ಎಂ ಸುಧಾಕರ್, ಡಾ.ಸೀತಾರಾಮ್ ಶೆಟ್ಟಿ, ಡಾ.ಪ್ರತೀತ್ ಬಲ್ಲಾಳ್ , ಲಯನ್ಸ್ ಬಸವರಾಜ್, ಜಗದೀಶ್,ಭಟ್ ಪ್ರಭಾಕರ, ಮೀನಾಕ್ಷಿ ಖಾದರ್ , ಇಂದಿರಾ ಪ್ರಭಾಕರ ಉಪಸ್ಥಿತರಿದ್ದರು.





