ಪುರುಷರಿಗೆ ಹಾರ್ಟ್ ಅಟ್ಯಾಕ್ ಆಗೋಕೆ ಇವೇ ಪ್ರಮುಖ ಕಾರಣಗಳು

ಇಂದಿನ ದಿನಗಳಲ್ಲಿ ಹಾರ್ಟ್‌ ಅಟ್ಯಾಕ್‌ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಹಲವರಿಗೆ ಎದೆ ನೋವು ಬಂದ ತಕ್ಷಣ ಹಾರ್ಟ್‌ಅಟ್ಯಾಕ್‌ ಆಗುತ್ತೆ. ಇದು ಯಾರಿಗೆ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಆಗಬಹುದು. ಮೊದಲೆಲ್ಲಾ ವಯಸ್ಸಾದವರಿಗೆ ಹೆಚ್ಚಾಗಿ ಆಗುತ್ತಿದ್ದ ಹಾರ್ಟ್ ಅಟ್ಯಾಕ್ ಇತ್ತೀಚಿನ ದಿನಗಳಲ್ಲಿ ಯುವಕರನ್ನು ಸಹ ಬಿಡುತ್ತಿಲ್ಲ. ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅನೇಕ ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಅದರಲ್ಲೂ ವಿಶೇಷವಾಗಿ ಪುರುಷರು ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯವಾಗಿ ನಾನಾ ಕಾರಣಗಳಿವೆ. ಅದರಲ್ಲಿ ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳು, ಮಾನಸಿಕ ಒತ್ತಡ, ಅನುವಂಶಿಕ ಸಮಸ್ಯೆಗಳು ಪ್ರಮುಖವಾಗಿದೆಅನೇಕ ಪುರುಷರು ಆಫೀಸಿನಲ್ಲಿ ಗಂಟೆಗಳ ಕಾಲ ಕುಳಿತಲ್ಲೇ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಅಲ್ಲದೇ ತರಕಾರಿಗಳು ಮತ್ತು ಹಣ್ಣುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವ ಬದಲು ಜಂಕ್ ಫುಡ್‌ಗಳ ಮೊರೆ ಹೋಗಿದ್ದಾರೆ. ಇವುಗಳ ಸೆವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.ಇದರಿಂದಾಗಿ ಹೃದಯಕ್ಕೆ ಸಾಕಷ್ಟು ರಕ್ತದ ಹರಿವು ಆಗುವುದಿಲ್ಲ. ಹೃದಯಕ್ಕೆ ಆಮ್ಲಜನಕದ ಪೂರೈಕೆ ಕೂಡ ಕಡಿಮೆ ಆಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು.

ಹಾರ್ಟ್ ಅಟ್ಯಾಕ್ಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಮಾನಸಿಕ ಒತ್ತಡ. ಪುರುಷರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಸದಾ ಒತ್ತಡದ ಮಧ್ಯೆ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ.ಈ ಒತ್ತಡವು ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಇಂತಹ ಸಮಯದಲ್ಲಿ ದುಃಖ ಮತ್ತು ನಕಾರಾತ್ಮಕ ಭಾವನೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ.ಅಲ್ಲದೇ ದೈಹಿಕ ಚಟುವಟಿಕೆಯ ಕೊರತೆ ಕೂಡ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ.

ಅನೇಕ ಪುರುಷರು ಕಚೇರಿಗಳಲ್ಲಿ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಹೀಗೆ ಕುರ್ಚಿಯ ಮೇಲೆ ಹೆಚ್ಚು ಸಮಯ ಕುಳಿತುಕೊಂಡೇ ಕಳೆಯುವುದರಿಂದ ದೇಹಕ್ಕೆ ಯಾವುದೇ ವ್ಯಾಯಾಮ ಸಿಗುವುದಿಲ್ಲ. ದೈಹಿಕ ವ್ಯಾಯಾಮದ ಕೊರತೆಯು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಆದರೆ, ಇದು ಹೃದಯಕ್ಕೆ ಅಪಾಯಕಾರಿ ಆಗಿದೆ.ಪುರುಷರಲ್ಲಿ ಆನುವಂಶಿಕ ಹೃದಯ ಅಸ್ವಸ್ಥತೆಗಳು ಪ್ರಮುಖ ಅಂಶವಾಗಿದೆ. ವಯಸ್ಕರಿಗೆ ಹೃದ್ರೋಗ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿದ್ದರೆ, ಆ ಸಮಸ್ಯೆಗಳನ್ನು ಆನುವಂಶಿಕವಾಗಿ ಪಡೆಯಬಹುದು. ಇದರರ್ಥ ಹೃದಯಾಘಾತಕ್ಕೆ ಒಳಗಾದ ಅಜ್ಜಿಯರು ಅಥವಾ ಇತರ ಕುಟುಂಬದ ಸದಸ್ಯರು ಅನುಭವಿಸಿದ ಅಪಾಯ ನಿಮಗೂ ಆಗಬಹುದು.

ಇವುಗಳಲ್ಲದೇ ಧೂಮಪಾನ, ಮದ್ಯಪಾನ ಮತ್ತು ಅಧಿಕ ತೂಕ ಕೂಡ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಿವೆ. ಧೂಮಪಾನವು ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳನ್ನು ಕಿರಿದಾಗಿಸುತ್ತದೆ ಮತ್ತು ಅಧಿಕ ತೂಕವು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.ಒಟ್ಟಾರೆ, ಪುರುಷರಲ್ಲಿ ಸಂಭವಿಸುವ ಹೃದಯಾಘಾತಕ್ಕೆ ಕಾರಣಗಳು ಜೀವನಶೈಲಿ, ಅವರ ಆಹಾರ ಪದ್ಧತಿ, ದೈಹಿಕ ವ್ಯಾಯಾಮ, ಮಾನಸಿಕ ಒತ್ತಡ ಮತ್ತು ಅನುವಂಶಿಕ ಅಂಶಗಳ ಮೇಲೆ ಅವಲಂಬಿತವಾಗಿದೆ. ನಾವು ಪ್ರತಿದಿನ ನಮ್ಮ ಜೀವನಶೈಲಿಯ ಬಗ್ಗೆ ಕೇಂದ್ರೀಕರಿಸುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 278 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 45 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 314 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 53 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 110 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ