ಮಂಗಳೂರು: ಹಲವು ಪ್ರತಿಭಟನೆಗಳ ನಂತರ ಸುರತ್ಕಲ್ ಟೋಲ್‌ಗೇಟ್ ತೆರವು ಘೋಷಣೆಯಾಗಿದ್ದು ಇದರ ಬೆನ್ನಲ್ಲೇ ಇದೀಗ ಹೆಜಮಾಡಿಯಲ್ಲಿ ಟೋಲ್ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಭಾರಿ ಪ್ರತಿಭಟನೆಯ, ಹೋರಾಟದ ನಂತರ ಸುರತ್ಕಲ್ ಟೋಲ್ ರದ್ದಾಗಿದ್ದು ಹೇಜಮಾಡಿ ಟೋಲ್ ದರ ಡಬಲ್ ಆಗಿದೆ. ಇದರಿಂದ ನವಯುಗ ಕಂಪೆನಿಗೆ ಪರೋಕ್ಷವಾಗಿ ಪ್ರತಿಭಟನೆ ಸಹಕಾರಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಪಿಸುಮಾತು ಕೇಳಿ ಬರುತ್ತಿದೆ. ಈ ಹಿಂದೆ ಸುರತ್ಕಲ್ ಟೋಲ್ ನಲ್ಲಿ ನಡೆಸಬೇಕಾಗಿದ್ದ ಮೈಂಟೆನೆನ್ಸ್ ಚಾರ್ಚ್ ನವಯುಗ ಕಂಪೆನಿಗೆ ಸಂಪೂರ್ಣ ಉಳಿತಾಯವಾಗಿದೆ.
ಸುರತ್ಕಲ್‌ನಲ್ಲಿ ಈ ಹಿಂದೆ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್‌ನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶ ಮಾಡಲಾಗಿದೆ. ಹೀಗಾಗಿ ಸುರತ್ಕಲ್ ಟೋಲ್ ಗೇಟ್ ರದ್ದಾದರೂ ಪ್ರಯಾಣಿಕರು ಹೆಜಮಾಡಿಯಲ್ಲಿ ಇನ್ನು ಮುಂದೆ ಹೆಚ್ಚುವರಿ ಟೋಲ್ ಪಾವತಿಸಬೇಕಿದೆ.
ಈ ಹಿಂದೆ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಕೆಎ-19 ಖಾಸಗಿ ವಾಹನಗಳಿಗೆ ಟೋಲ್ ರಿಯಾಯಿತಿ ಇತ್ತು. ಇನ್ನು ಮುಂದೆ ಈ ರಿಯಾಯಿತಿ ಇರುವುದಿಲ್ಲ. ಸುರತ್ಕಲ್ ಟೋಲ್‌ನಲ್ಲಿ ಹಿಂದೆ ಬೇರೆ ವಾಹನಗಳು ಎಷ್ಟು ಟೋಲ್ ಕಟ್ಟುತ್ತಿದ್ದವೋ ಅದನ್ನು ಸೇರಿಸಿ ಹೆಜಮಾಡಿಯಲ್ಲಿ ಕಟ್ಟಬೇಕಿದೆ.
ಪರಿಷ್ಕೃತ ದರ
ಕಾರು ಜೀಪು ವ್ಯಾನ್ ಸೇರಿ ಲಘು ವಾಹನಗಳಿಗೆ ಸಿಂಗಲ್ ಟ್ರಿಪ್ 100 ರು., ರಿಟರ್ನ್ ಟ್ರಿಪ್ 155 ರು, ತಿಂಗಳ ಪಾಸ್ (50 ಸಿಂಗಲ್ ಟ್ರಿಪ್‌ಗಳಿಗೆ) 3460 ರು., ಲಘು ವಾಣಿಜ್ಯ ವಾಹನಗಳು, ಲಘು ಗೂಡ್ಸ್, ಮಿನ್ ಬಸ್‌ಗಳಿಗೆ ಸಿಂಗಲ್ ಟ್ರಿಪ್ 170 ರು., ರಿಟರ್ನ್ ಟ್ರಿಪ್ 250 ರು. ತಿಂಗಳ ಪಾಸ್ 5590 ರು., ಬಸ್, ಟ್ರಕ್ (6 ಆಕ್ಸೆಲ್)ಗಳಿಗೆ ಸಿಂಗಲ್ ಟ್ರಿಪ್‌ಗೆ 355 ರು., ರಿಟರ್ನ್ ಟ್ರಿಪ್‌ಗೆ 565 ರು., ತಿಂಗಳ ಪಾಸ್‌ಗೆ 11,705 ರು., ಭಾರಿ ನಿರ್ಮಾಣ ಯಂತ್ರಗಳು, ಜೆಸಿಬಿಗಳು, ಮಲ್ಟಿ ಆಕ್ಸೆಲ್ ವಾಹನಗಳಿಗೆ ಸಿಂಗಲ್ ಟ್ರಿಪ್‌ಗೆ 550 ರು., ರಿಟರ್ನ್ ಟ್ರಿಪ್‌ಗೆ 865 ರು., ತಿಂಗಳ ಪಾಸ್‌ಗೆ 18,360 ರು., ಏಳಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಸಿಂಗಲ್ ಟ್ರಿಪ್‌ಗೆ 675 ರು., ರಿಟರ್ನ್ ಟ್ರಿಪ್‌ಗೆ 1005 ರು., ತಿಂಗಳ ಪಾಸ್‌ಗೆ 22,350 ರು. ಸುಂಕ ನಿಗದಿ ಮಾಡಲಾಗಿದೆ.