TRENDING
Next
Prev

ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ವಿವಾದ; ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಆದೇಶ

READ ALSO

ಬೆಂಗಳೂರು: ಬಹಳ ಕುತೂಹಲದಿಂದ ಕಾಯುತ್ತಿದ್ದ ಹಿಜಾಬ್ ಪ್ರಕರಣವನ್ನು ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದ್ದಾರೆ.

ಪ್ರಕರಣ ಕುರಿತು 2 ದಿನ ಸುದೀರ್ಘ ವಾದ ವಿವಾದ ನಡೆದ ನಂತರ ಪ್ರಕರಣವನ್ನು ನ್ಯಾಯಾಧೀಶರು ಪ್ರಕರಣದ ಕುರಿತು ವಿಸ್ತೃತ ಚರ್ಚೆಯಾಗಬೇಕಾದ ಅಗತ್ಯವಿದೆ. ಹಾಗಾಗಿ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರಕ್ಕೆ ವರ್ಗಾಯಿಸುತ್ತೇನೆ ಎಂದು ತಿಳಿಸಿದರು.

2 ತಿಂಗಳ ಅವಧಿಗೆ ಹಿಜಾಬ್ ಧರಿಸಲು ಮಧ್ಯಂತರ ತೀರ್ಪು ನೀಡುವಂತೆ ಅರ್ಜಿದಾರರ ಪರ ವಕೀಲರ ಕೋರಿಕೆಯನ್ನು ನ್ಯಾಯಾಧೀಶರು ಮನ್ನಿಸಲಿಲ್ಲ.

ಧರ್ಮದ ವಿಚಾರ ಮತ್ತು ಸಾಂವಿಧಾನಿಕ ವಿಚಾರವಿರುವುದರಿಂದ, ಸೂಕ್ಷ್ಮ ವಿಚಾರವಾಗಿರುವುದರಿಂದ ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಇದರಿಂದಾಗಿ ಪ್ರಕರಣದ ತೀರ್ಪು ತಕ್ಷಣಕ್ಕೆ ಬರುತ್ತದೆ ಎನ್ನುವ ನಿರೀಕ್ಷೆ ಈಡೇರಲಿಲ್ಲ. ಮುಖ್ಯ ನ್ಯಾಯಾಧೀಶರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.