ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುತ್ತಿರುವುದು ‘ಬಾಲಿವುಡ್’ನ ಷಡ್ಯಂತ್ರ ! – ನಟಿ ಪಾಯಲ ರೊಹತಗಿ

ಬೆಂಗಳೂರು: ‘ಪಿಕೆ’ಯಂತಹ ಚಲನಚಿತ್ರ, ‘ಪಾತಾಲಲೋಕ’ನಂತಹ ವೆಬ್‌ಸೀರಿಸ್ ಮಾಧ್ಯಮಗಳಿಂದ ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುವ ‘ಬಾಲಿವುಡ್’ನ ಷಡ್ಯಂತ್ರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ದೇವತೆಗಳು, ಪರಂಪರೆ ಇತ್ಯಾದಿಗಳನ್ನು ಅಣಕಿಸಲಾಗುತ್ತಿದೆ. ಹಿಂದೂ ಸಮಾಜ ಇದರ ಬಗ್ಗೆ ಧ್ವನಿ ಎತ್ತದ ಕಾರಣ ‘ಬಾಲಿವುಡ್’ನಲ್ಲಿ ಹಿಂದೂದ್ರೋಹಕ್ಕೆ ನೀರುಗೊಬ್ಬರ ಹಾಕಲಾಗುತ್ತಿದೆ. ಬ್ರಾಹ್ಮಣ ವ್ಯಕ್ತಿಗೆ ಕಪಟಿ ಅಥವಾ ಅತ್ಯಾಚಾರಿ ಎಂದು ತೋರಿಸುವುದು, ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾಗುತ್ತಿರುವಂತೆ ತೋರಿಸುವುದು, ಇವೆಲ್ಲ ಸಮಾಜದ ‘ಬ್ರೇನ್‌ವಾಶ್’ ಆಗಿದೆ. ‘ಜೈ ಶ್ರೀರಾಮ’ನ ಜಯಘೋಷವನ್ನು ಅವಮಾನಿಸುವ ಬಾಲಿವುಡ್‌ನವರು ಭಯೋತ್ಪಾದಕರ ವಿಶಿಷ್ಟ ಘೋಷಣೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ? ‘ತ್ರಿವಳಿ ತಲಾಕ’ ಬಗ್ಗೆ ಏಕೆ ಮಾತನಾಡುವುದಿಲ್ಲ ?, ಎಂದು ಹೇಳುತ್ತಾ ಇವೆಲ್ಲ ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುತ್ತಿರುವ ‘ಬಾಲಿವುಡ್’ನ ಪಿತೂರಿ ಆಗಿದೆ ಎಂದು ಹಿಂದಿ ಚಲನಚಿತ್ರದ ನಟಿ ಪಾಯಲ ರೊಹತಗಿ ಯವರು ಎಲ್ಲ ಬಾಲಿವುಡ್‌ನವರಿಗೆ ಜ್ವಲಂತ ಪ್ರಶ್ನೆಯನ್ನು ಕೇಳಿದ್ದಾರೆ.

ಅವರು ಜುಲೈ ೧೯ ರಂದು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಷ್ರ ಕೀ’ ಈ ಆನ್‌ಲೈನ್ ಸಂವಾದ ಸರಣಿಯಲ್ಲಿ ‘ಹಿಂದೂವಿರೋಧಿ ‘ಬಾಲಿವುಡ್’ ಕಾ ಪರ್ದಾಫಾಶ್’ ಈ ವಿಷಯದಲ್ಲಿ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಚರ್ಚೆಯ ಆರಂಭದಲ್ಲಿ ಚಲನಚಿತ್ರ, ಧಾರಾವಾಹಿ, ‘ವೆಬ್‌ಸೀರಿಸ್’ನ ಮಾಧ್ಯಮಗಳಿಂದ ಕ್ರಮಬದ್ಧವಾಗಿ ಹಿಂದೂ ಧರ್ಮ ಹಾಗೂ ಸಮಾಜ ಇವುಗಳನ್ನು ಹೇಗೆ ಅವಮಾನಿಸಲಾಗುತ್ತಿದೆ, ಎಂಬುದನ್ನು ಹೇಳುವ ವಿಡಿಯೋ ತೋರಿಸಲಾಯಿತು. ಈ ಆನ್‌ಲೈನ್ ಸಂವಾದವನ್ನು ಯೂ-ಟ್ಯೂಬ್ ಹಾಗೂ ಫೇಸ್‌ಬುಕ್‌ನ ಮಾಧ್ಯಮಗಳಿಂದ ೩,೮೯,೭೬೦ ಜನರ ತನಕ ತಲುಪಿದರೆ, ೧,೦೮,೪೧೧ ಜನರು ಪ್ರತ್ಯಕ್ಷವಾಗಿ ನೋಡಿದರು. ಈ ವಿಷಯದಲ್ಲಿ ಅನೇಕರು ಟ್ವಿಟ್ಟರ್#Censor_Web_Series ಈ ಹ್ಯಾಶ್‌ಟ್ಯಾಗ್‌ಅನ್ನು ಉಪಯೋಗಿಸಿ ಬೆಂಬಲಿಸಿದರು. ಕೆಲವೇ ಸಮಯದಲ್ಲಿ ಈ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿ ಮೊದಲನೇಯ ಸ್ಥಾನದಲ್ಲಿತ್ತು. ಈ ವಿಷಯ ಬಗ್ಗೆ ೧ ಲಕ್ಷಕ್ಕಿಂತಲೂ ಹೆಚ್ಚು ಟ್ವೀಟ್ಸ್ ಮಾಡಲಾಗಿದೆ.

ಈ ಸಂವಾದದಲ್ಲಿ ಸಹಭಾಗಿಯಾಗಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾರವರು ಮಾತನಾಡುತ್ತಾ, ‘ಬಾಲಿವುಡ್’ ಇದು ಜಿಹಾದಿಗಳ ತಾಣವಾಗಿದ್ದು ಇಲ್ಲಿ ‘ಲವ್ ಜಿಹಾದ್’ಗೆ ಪೋಷಿಸಲಾಗುತ್ತಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರದಲ್ಲಿ ಬಾಲಿವುಡ್‌ನ ದೊಡ್ಡ ಕೈವಾಡವಿದೆ. ಹಾಜಿ ಮಸ್ತಾನ, ದಾವುದ್ ಇಬ್ರಾಹಿಮ್‌ನಂತಹ ‘ಭೂಗತ’ದ ಗೂಂಡಾಗಳು ‘ಬಾಲಿವುಡ್’ಗೆ ನಿಧಿಯನ್ನು ನೀಡಿ ಆಯೋಜನಾಬದ್ಧವಾಗಿ ‘ಖಾನ್’ಗಳನ್ನು ಸ್ಥಾಪಿಸಿದ್ದಾರೆ. ಬಾಲಿವುಡ್‌ನ ಈ ಜಿಹಾದಿ ಅಂಗವನ್ನು ‘ಎನ್‌ಐಎ’ನಿಂದ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ಚಲನಚಿತ್ರ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಹಿಂದೂವಿನ ಹನನವನ್ನು ತಡೆಗಟ್ಟುವ ಹಿಂದುತ್ವನಿಷ್ಠ ಶ್ರೀ. ರಮೇಶ ಸೋಲಂಕಿಯವರು ಮಾತನಾಡುತ್ತಾ, ‘ಬಾಲಿವುಡ್’ ಇದು ‘ಡಿ ಗ್ಯಾಂಗ್’ನ ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಮಾಧ್ಯಮವಾಗಿದೆ. ವಿನೋದ ಅಥವಾ ಮನೋರಂಜನೆಗಾಗಿ ಹಾಸ್ಯವನ್ನು ಮಾಡದೇ ಹಿಂದೂ ಧರ್ಮ ಹಾಗೂ ಪರಂಪರೆಗಳ ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ ಹೋರಾಡಬೇಕಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ಮುಂಬಯಿಯಲ್ಲಿ ೨೦೧೨ ರಲ್ಲಿ ಗಲಭೆಯನ್ನು ಮಾಡಿದ್ದ ರಝಾ ಅಕಾಡಮಿಯವರ ಬೇಡಿಕೆಯನುಸಾರ ‘ಮಹಮ್ಮದ್ : ದ ಮೆಸೆಂಜರ ಆಫ್ ಗಾಡ್’ ಈ ಚಲನಚಿತ್ರದ ಮೇಲೆ ನಿರ್ಬಂಧ ಹೇರಲು ಮಹಾರಾಷ್ಟ್ರ ಸರಕಾರ ಕೂಡಲೇ ಶಿಫಾರಸ್ಸನ್ನು ಮಾಡಿತು; ಆದರೆ ಹಿಂದೂ ಧರ್ಮದ ಮೇಲೆ ಆಘಾತ ಮಾಡುವ ಚಲನಚಿತ್ರಗಳ ಬಗ್ಗೆ ಹಿಂದೂಗಳು ಎಷ್ಟೇ ವಿರೋಧಿಸಿದರು ಸರಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಕಾನೂನಿನ ಬಂಧನ ಇಲ್ಲದ್ದರಿಂದ ‘ಓಟಿಟಿ’ ಪ್ಲಾಟ್‌ಫಾರ್ಮ್ಸ್ ನಿಂದ ಅತ್ಯಂತ ಅಕ್ಷೇಪಾರ್ಹ, ಹಿಂದೂವಿರೋಧಿ, ದೇಶವಿರೋಧಿ ಹಾಗೂ ಸೈನ್ಯವಿರೋಧಿ ‘ವೆಬ್‌ಸೀರಿಸ್’ಗಳ ಪ್ರಸಾರವಗುತ್ತಿದೆ. ‘ಕೋರ್ಟ್ ಮಾರ್ಶಲ್’, ‘ಕೋಡ್ ಎಮ್’ ನಂತಹ ವೆಬ್‌ಸೀರಿಸ್‌ಗಳಲ್ಲಿ ಭಾರತೀಯ ಸೈನಿಕರು ಸಲಿಂಗಿಗಳೆಂದು ತೋರಿಸಲಾಗಿದೆ. ಆದರೆ ಸರಕಾರ ಮಾತ್ರ ಇಂತಹ ‘ವೆಬ್‌ಸೀರಿಸ್’ ಹಾಗೂ ‘ಓಟಿಟಿ ಪ್ಲಾಟ್‌ಫಾರ್ಮ್ಸ್’ಗಳನ್ನು ಕೇಂದ್ರಿಯ ಚಲನಚಿತ್ರ ಪರೀಕ್ಷಣಾ ಮಂಡಳಿಯ ನಿಯಂತ್ರಣಕ್ಕೆ ತರಬೇಕು ಎಂದು ಹೇಳಿದರು.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 53 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 35 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 42 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 71 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ