ಶ್ರೀಕೃಷ್ಣಜನ್ಮಭೂಮಿಯ ಒಂದಿಂಚು ಭೂಮಿಯನ್ನೂ ಅಕ್ರಮ ಮಸೀದಿಗಾಗಿ ಬಿಡುವುದಿಲ್ಲ ! – ನ್ಯಾಯವಾದಿ ವಿಷ್ಣುಶಂಕರ ಜೈನ್
ಶ್ರೀಕೃಷ್ಣಜನ್ಮಭೂಮಿ ಪ್ರಕರಣದಲ್ಲಿ 12.10.1968 ರಲ್ಲಿ ಏನು ರಾಜಿ ಮಾಡಿಕೊಳ್ಳಲಾಗಿತ್ತೋ, ಅದರ ಮೇಲೆ ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್‌ನ ಹಸ್ತಾಕ್ಷರ ಇರಲಿಲ್ಲ, ಆದ್ದರಿಂದ ಆ ಒಪ್ಪಂದ ಅಮಾನ್ಯರವಾಗಿದೆ. ಆದ್ದರಿಂದ ಜಿಲ್ಲಾ ನ್ಯಾಯಾಧೀಶರು ತೀರ್ಪಿನಲ್ಲಿ, ಭಗವಾನ ಹಾಗೂ ಭಕ್ತರು ಇಬ್ಬರೂ ಈ ಪ್ರಕರಣದ ಬಗ್ಗೆ ಖಟ್ಲೆಯನ್ನು ಸಲ್ಲಿಸಬಹುದು. ಆದ್ದರಿಂದ ದಿವಾಣಿ ನ್ಯಾಯಾಲಯದ ತೀರ್ಪು ರದ್ದುಪಡಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಖಟ್ಲೆಯ ಬಗ್ಗೆ ಆಲಿಕೆ ಆರಂಭವಾಗಲಿದೆ. ಇಲ್ಲಿಯ 13.37 ಎಕರೆ ಸಂಪೂರ್ಣ ಭೂಮಿ ಶ್ರೀಕೃಷ್ಣಜನ್ಮಭೂಮಿಯದ್ದಾಗಿದೆ, ಅದರಲ್ಲಿಯ ಒಂದಿಂಚಿನಷ್ಟೂ ಭೂಮಿಯ ಮೇಲೆ ಅಕ್ರಮ ಮಸೀದಿ ಇರಲು ಸಾಧ್ಯವಿಲ್ಲ. ಆ ಅಕ್ರಮ ಮಸೀದಿಯ ತೆರವುಗೊಳಿಸಬೇಕು. ಶ್ರೀಕೃಷ್ಣಭೂಮಿಗಾಗಿ ನಮ್ಮ ಹೋರಾಟ ಮುಂದುವರಿಸುವೆವು, ಎಂದು ಈ ಪ್ರಕರಣದ ಬಗ್ಗೆ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟೀಸ್‌ನ ವಕ್ತಾರರಾದ ವಿಷ್ಣು ಶಂಕರ ಜೈನ್ ಇವರು ಖಂಡತುಂಡವಾಗಿ ಪ್ರತಿಪಾದಿಸಿದರು.
ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ವಿಶೇಷ ಆನ್‌ಲೈನ್ ಪರಿಸಂವಾದದಲ್ಲಿ ನ್ಯಾಯವಾದಿ ವಿಷ್ಣು ಜೈನ್ ಇವರು ತಮ್ಮ ನಿಲುವನ್ನು ಮಂಡಿಸುತ್ತಾ, ಔರಂಗಜೇಬನ ಲಿಖಿತ ಆದೇಶದಂತೆ ಮಥುರಾದಲ್ಲಿರುವ ಪ್ರಸ್ತುತ ದೇವಾಲಯವು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ ಎಂಬ ಪುರಾವೆಗಳು ಇಂದಿಗೂ ಲಭ್ಯವಿದೆ. ಸ್ವಾತಂತ್ರ್ಯಪೂರ್ವದ ಅವಧಿಯಲ್ಲಿಯೂ ಹಿಂದೂಗಳು ಶ್ರೀಕೃಷ್ಣಜನ್ಮಭೂಮಿ ಖಟ್ಲೆಯನ್ನು ಹಲವು ಬಾರಿ ಗೆದ್ದಿದ್ದರು. 1951 ರಲ್ಲಿ, ಪಂಡಿತ್ ಮದನ ಮೋಹನ ಮಾಲವಿಯಾ ಅವರು ಅಧಿಕೃತವಾಗಿ ‘ಶ್ರೀಕೃಷ್ಣ ಜನ್ಮಭೂಮಿ ಮಂದಿರ ಸೇವಾ ಟ್ರಸ್ಟ್’ಅನ್ನು ಸ್ಥಾಪಿಸಿದ್ದರು. ಆದರೆ, 1956 ರಲ್ಲಿ ‘ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘ’ ಎಂಬ ನಕಲಿ ಪಕ್ಷವನ್ನು ಸ್ಥಾಪಿಸಲಾಯಿತು. ‘ನಮಗೆ ಈ ಭೂಮಿ ಸಿಕ್ಕಿದೆ’ ಎಂದು ಈ ಸಂಘವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. 1968 ರಲ್ಲಿ ಮುಸ್ಲಿಂ ಪಕ್ಷಕಾರ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಘದ ನಡುವೆ ರಾಜಿ ಮಾಡಿಕೊಂಡ ನಂತರ ಮೂಲ ದೇವಾಲಯದ ಸ್ಥಳವು ಮಸೀದಿಯ ಬಳಿ ಉಳಿಯುವುದು ಎಂದು ನ್ಯಾಯಾಲಯವು ತೀರ್ಪು ನೀಡಿತು. ಆ ತೀರ್ಪು ಸಂಪೂರ್ಣವಾಗಿ ಅಮಾನ್ಯವಾಗಿದೆ. ಶ್ರೀಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಕೆಳಗೆ ಪುರಾತತ್ವ ಇಲಾಖೆ ಉತ್ಖನನ ಮಾಡಿದರೆ, ಮೂಲ ಅವಶೇಷಗಳು ಖಂಡಿತವಾಗಿಯೂ ಕಂಡುಬರುತ್ತವೆ, ಎಂದರು.
ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ’ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಯ ಸಂಘರ್ಷ’ ಕುರಿತು ವಿಶೇಷ ಪರಿಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವು ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ ಮೂಲಕ 19,677 ಜನರು ನೇರಪ್ರಸಾರ ವೀಕ್ಷಿಸಿದರು ಮತ್ತು 39,219 ಜನರ ವರೆಗೆ ತಲುಪಿತು. #Reclaim_KrishnaJanmabhoomi ಎಂಬ ‘ಹ್ಯಾಶ್‌ಟ್ಯಾಗ್’ ಟ್ವಿಟರ್‌ನಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್‌ದಲ್ಲಿತ್ತು.
…. ಇದು ಶ್ರೀಕೃಷ್ಣಜನ್ಮಭೂಮಿ ಆಂದೋಲನದ ಹೋರಾಟದ ಗೆಲುವಿನ ಆರಂಭ !
ಶ್ರೀಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಅನುಚಿತವಾಗಿ ವಜಾಗೊಳಿಸಲಾಗಿದೆ, ಈಗ ಅದೇ ಅರ್ಜಿಯನ್ನು ಜಿಲ್ಲಾ ನ್ಯಾಯಾಧೀಶರು ಅಂಗೀಕರಿಸಿದ್ದಾರೆ ಮತ್ತು ಖಟ್ಲೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದು ನಮಗೆ ಬಹಳ ಆನಂದದಾಯಕ ಮತ್ತು ಮಹತ್ವದ ವಿಷಯವಾಗಿದೆ ಮತ್ತು ಇದು ಶ್ರೀಕೃಷ್ಣಜನ್ಮಭೂಮಿ ಆಂದೋಲನದ ಹೋರಾಟದ ವಿಜಯದ ಪ್ರಾರಂಭವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಈ ಸಂದರ್ಭದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.