ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿತು ಹೋರಾಟ ಮಾಡುವುದು ಅವಶ್ಯ: ಶ್ರೀಧರ್ ಗೌಡ ಈದು

ನಾವುರ: ಶಿವಪಾರ್ವತಿ ಭಜನಾ ಮಂಡಳಿ ಪುಳಿತ್ತಡಿ ಶಿವ ಪ್ರೆಂಡ್ಸ್ ನಾವುರ ಇದರ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಹೊನಳು ಬೆಳಕಿನ ಮುಕ್ತ ಕಬ್ಬಡಿ ಪಂದ್ಯಾಟ ನಾವುರದಲ್ಲಿ ನಡೆಯಿತು.

ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಈದು ಕ್ರೀಡಾ ಚಟುವಟಿಕೆಗಳ ಮೂಲಕ ಸಮುದಾಯ ಭಾಂಧವರ ಮದ್ಯೆ ಭಾಂದವ್ಯ ವೃದ್ದಿಸುತ್ತಿದೆ ಸಮುದಾಯ ಎದುರಿಸುತ್ತಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾನೂನು ರೀತಿಯಲ್ಲಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಗಮನಸೆಳೆಯುವ ಪ್ರಯತ್ನ ಮಾಡಲಾಗುತ್ತಿದ್ದು. ಸಂವಿಧಾನ ನೀಡಿರುವ ಹಕ್ಕುಗಳನ್ನು ಪ್ರತಿಪಾದಿಸುವ ಜೊತೆಗೆ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎಂದರು. ಬಂಗಾಡಿ ಸಿ.ಎ ಬ್ಯಾಂಕ್ ನ ಅಧ್ಯಕ್ಷರಾದ ಹರೀಶ್ ಮೋರ್ತಾಜೆರವರು ಮಾತನಾಡಿ ರಾಜ್ಯ ಮಟ್ಟದ ಪಂದ್ಯಾಟ ನಾವುರದಲ್ಲಿ ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಧಾರ್ಮಿಕ ಕ್ಷೇತ್ರದಲ್ಲಿ ಮಲೆಕುಡಿಯರ ಕೊಡುಗೆ ಅವಿಸ್ಮರಣೀಯ ಎಂದರು.

READ ALSO

ಕೃಷಿ ವಿಜ್ಞಾನಿ ಲಾವಣ್ಯ ಎಂ.ಕೆ, ಪ್ರಗತಿಪರ ಕೃಷಿಕರಾದ ಲೋಕಯ್ಯ ಪುಳಿತ್ತಡಿ, ಜಿನ್ನಪ್ಪ ಕೊಡಂಗೆ, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕುಸುಮ ಅಲ್ಯ, ಕುಮುದ ಅಲ್ಯ ರನ್ನು ಸನ್ಮಾನಿಸಲಾಯಿತು.

ಶಿವಪ್ರೆಂಡ್ಸ್ ನ ಅಧ್ಯಕ್ಷರಾದ ಕೊರಗು ಮಲೆಕುಡಿಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷರಾದ ಅಣ್ಣಪ್ಪ ಎನ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ನಾವುರ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ವೇದಾವತಿ, ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವುರ, ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿಯ ಕಾರ್ಯದರ್ಶಿ ಜಯಾನಂದ ಸವಣಾಲು , ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷರು ಭೂ ನ್ಯಾಯ ಮಂಡಳಿಯ ಸದಸ್ಯರಾದ ಹರೀಶ್ ಎಳನೀರ್ , ಶಿವಪ್ಪ ಪುಳಿತ್ತಡಿ, ಬಾಲಕೃಷ್ಣ ಕಾಸ್ರೋಳ್ಳಿ, ದೇವಪ್ಪ ಪುದುವೆಟ್ಟು, ಎ.ಬಿ ಉಮೇಶ್ ಅತ್ಯಡ್ಕ, ಪುಟ್ಟಣ್ಣ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ ಶಾಲೆ ನಾವುರ, ಗುಂಗಾಧರ ಈದು, ದೇವಪ್ಪ ನಾವುರ ಮೊದಲಾದವರು ಉಪಸ್ಥಿತರಿದ್ದರು. ಪುಟ್ಟಣ್ಣ ಎಂ.ಜಿ ಸ್ವಾಗತಿಸಿ ವಂದಿಸಿದರು