ಮಾನವ ಹಕ್ಕು ರಕ್ಷಣೆ ನೂತನ ಆ್ಯಪ್​ಗೆ ಸಿಎಂ ಬಿಎಸ್​ವೈ ಯವರಿಂದ ಚಾಲನೆ!

ಬೆಂಗಳೂರು: ರಾಜ್ಯ ಮಾನವ ಹಕ್ಕು ಆಯೋಗದ ವತಿಯಿಂದ ಆಯೋಜಿಸಿರುವ ಮಾನವ ಹಕ್ಕು ರಕ್ಷಣೆ ಮೊಬೈಲ್ ಆ್ಯಪ್ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೊಕಾರ್ಪಣೆ ಮಾಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೂತನ ಆ್ಯಪ್​ಗೆ ಸಿಎಂ ಬಿಎಸ್​ವೈ ಚಾಲನೆ ನೀಡಿದರು.

READ ALSO

ರಾಜ್ಯ ಮಾನವ ಹಕ್ಕು ರಕ್ಷಣೆ ಆ್ಯಪ್ ಬಿಡುಗಡೆ, ಮಾನವ ಹಕ್ಕಿನ ರಕ್ಷಣೆ ಸಂವಿಧಾನದ ಪ್ರಮುಖ ಆಶಯ. ಮಾನವ ಹಕ್ಕು ಸಂರಕ್ಷಣೆ ನಮ್ಮೆಲ್ಲರ‌ ಕರ್ತವ್ಯ. ಹಕ್ಕಿನ ಅರಿವಿನ ಕೊರತೆಯಿಂದ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹಾಗಾಗಿ ಮಾನವ ಹಕ್ಕುಗಳ ರಕ್ಷಣೆಯ ಅರಿವು ಅಗತ್ಯ ಎಂದರು.ಮಾನವ ಹಕ್ಕಿನ ಉಲ್ಲಂಘನೆಗೆ ತುತ್ತಾಗುತ್ತಿರುವವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾನವ ಹಕ್ಕು ಆಯೋಗ ಮಾಡುತ್ತಿದೆ. ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಆಯೋಗಕ್ಕೆ ದೂರು‌ ನೀಡಿ ನ್ಯಾಯ ಪಡೆಯಲು ಆ್ಯಪ್ ಅಭಿವೃದ್ಧಿ ಮಾಡಿರುವುದು ಶ್ಲಾಘನೀಯ. ಇದರಿಂದ ತ್ವರಿತ ನ್ಯಾಯ ಹಾಗೂ ಪರಿಹಾರ ಪಡೆಯಬಹುದಾಗಿದೆ. ಈ ಸೌಲಭ್ಯದ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಸಿಎಂ ಆಶಿಸಿದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಮಾನವ ಹಕ್ಕುಗಳ ಅಧ್ಯಕ್ಷ ಡಿ.ಹೆಚ್.ವಘೇಲಾ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಗೂ ಇತರರು ಉಪಸ್ಥಿತರಿದ್ದರು.