ಕುಸಿಯುವ ಭೀತಿಯಲ್ಲಿ ಎಂಟು ಅಂತಸ್ತಿನ ಕಟ್ಟಡ

ಮಣಿಪಾಲ :  ಭಾರಿ ಮಳೆಯಿಂದಾಗಿ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಭೀತಿಯಲ್ಲಿದೆ.

READ ALSO

ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ನೀರಿನ ಸಹಜ ಹರಿವಿಗೆ ತಡೆಯೊಡ್ಡಿದ ಕಾರಣ ಭೂಕುಸಿತವಾಗಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ ಭೂಕುಸಿತ ಕಾಣಿಸಿಕೊಂಡಿತ್ತು. ಕಟ್ಟಡದಲ್ಲಿರುವ ಎಲ್ಲರಿಗೂ ಮನೆ ಖಾಲಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಟ್ಟಡ ತಡೆಗೋಡೆ ಕುಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು ಬಂದ್ ಮಾಡಲಾಗಿದ್ದು ಇನ್ನೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವನ್ನು ಪೊಲೀಸರು ಸಂಚಾರಕ್ಕೆ ನಿರ್ಬಂಧಿಸಿದ್ದಾರೆ. ತಹಶೀಲ್ದಾರ್, ನಗರಸಭಾ ಕಮಿಷನರ್ ಸೇರಿ ಹಲವಾರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.