ಇಂದಬೆಟ್ಟು ಗ್ರಾ.ಪಂ ನಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ,‌ ಅಧಿಕಾರಿಗಳಿಂದಲೇ ಕರ್ತವ್ಯ ಲೋಪ ಆಗಿರುವ ಕುರಿತು ಲೋಕಾಯುಕ್ತ ವರದಿ ಸಲ್ಲಿಕೆ

ಬೆಳ್ತಂಗಡಿ : ಇಂದಬೆಟ್ಟು ಗ್ರಾಮ ಪಂಚಾಯತ್ ನ 2021-22 ಸಾಲಿನ ವಿವಿಧ ಕಾಮಗಾರಿಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ
ನಡೆಸಿ ವರದಿ ನೀಡಿದ್ದು ಇಂದಬೆಟ್ಟು ಗ್ರಾ.ಪಂ‌ ಮಾಜಿ ಅಧ್ಯಕ್ಷ ಆನಂದ ಇಂಜಿನಿಯರ್ ಗಳು ಹಾಗೂ ಅಂದಿನ ಅಭಿವೃದ್ಧಿ ಅಧಿಕಾರಿಯವರು ಕರ್ತವ್ಯ ಲೋಪ ಎಸಗಿರುವುದಾಗಿ ವರದಿ ನೀಡಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ 15 ನೇ ಹಣಕಾಸಿನ ಯೋಜನೆಯ 2021-22 ರಲ್ಲಿ ನಡೆದ ವಿವಿಧ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಬಂಗಾಡಿ ನಿವಾಸಿ ಜಯರಾಮ.ಕೆ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಈ ಸಂಬಂಧ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಇದೀಗ ಜಯರಾಮ ಅವರು ಮಾಡಿರುವ ಆರೋಪಗಳು ಸತ್ಯವಾಗಿದ್ದು ಕರ್ತವ್ಯ ಲೋಪವೆಸಗಿರುವವರ ವಿರುದ್ದ ಕ್ರಮ ಕೈಗೊಳ್ಳಲು ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ಗ್ರಾಮ ಪಂಚಾಯತ್ ನಲ್ಲಿ 13 ಕಾಮಗಾರಿಯಲ್ಲಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ಅದಲ್ಲದೆ ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಭ್ರಷ್ಟಾಚಾರ ಮಾಡಿದರಲ್ಲಿ 7 ಅಂಶಗಳನ್ನು ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ‌.

ಜು.9,10 ರಂದು ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಇಂಜಿನಿಯರ್ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಆಗಮಿಸಿ ತನಿಖೆ ನಡೆಸಿದ್ದರು.

ತನಿಖೆಯಲ್ಲಿ ಕಾಮಗಾರಿಗಳಲ್ಲಿ ಕಂಡುಬಂದಿರುವ ನ್ಯೂನ್ಯತೆಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ಗುರುತಿಸಿದ್ದಾರೆ. ಕಾಮಗಾರಿಗಳನ್ನು ಯಾವುದೇ ಗುತ್ತಿಗೆ ನೀಡದೆ ತುಂಡು ಗುತ್ತಿಗೆ ನೀಡಿ ನಿರ್ವಹಿಸಲಾಗಿದೆ, ಕಾಮಗಾರಿಗಳ ಅಳತೆ ಪುಸ್ತಕದಲ್ಲಿ ಯಾವುದೇ ಸಮರ್ಕವಾದ ಮಾಹಿತಿಗಳಿಲ್ಲ, ಕಾಮಗಾರಿಯ ಆರಂಭದ ಸ್ಥಳ ಮತ್ತು ಕೊನೆಯಾದ ಸ್ಥಳದ ದಾಖಲೆಗಳಿಲ್ಲ ಹಾಗೂ ಜಿಪಿಎಸ್ ಫೊಟೋಗಳಿಲ್ಲ, ಅಂಗವಿಕಲರ ಹಾಗೂ ಎಸ್.ಸಿ, ಎಸ್.ಟಿ ವಿಭಾಗಕ್ಕೆ ಬೇಕಾದ ಕಾಮಗಾರಿಗಳನ್ನು ರೂಪಿಸಿಲ್ಲ, ವಿದ್ಯುತ್ ಉಪಕರಣಗಳಿಗೆ ಸಂಭಂಧಿಸಿದ ಕಾಮಗಾರಿಗಳನ್ನು ಅಂದಾಜು ಪಟ್ಟಿಯೇ ಇರುವುದಿಲ್ಲ, ಹಲವಾರು ಬದಲಿ ಕಾಮಗಾರಿಗಳನ್ನು ಮಾಡಲಾಗಿದ್ದು ಅದರ ದಾಖಲೆಗಳು ಸಮರ್ಪಕವಾಗಿಲ್ಲ, ರಸ್ತೆಬದಿಯ ಕಾಡು ತೆಗೆದಿರುವ ಹಾಗೂ ರಸ್ತೆಗೆ ಚರಳ್ ಹಾಕಿರುವ ಕಾಮಗಾರಿಗಳಲ್ಲಿ ಪಾರದರ್ಶಕವಾಗಿಲ್ಲ. ಈ ಕಾಮಗಾರಿಗಳು ನಡೆದಿದೆಯೇ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರಗಳನ್ನು ತನಿಖೆ ನಡೆಸಿದ ಅಧಿಕಾರಿಗಳು ಗುರುತಿಸಿ ವರದಿ ನೀಡಿದ್ದಾರೆ.

ಬೆಂಗಳೂರು ಲೋಕಾಯುಕ್ತ ತಾಂತ್ರಿಕ ವಿಭಾಗದ ಲೆಕ್ಕ ಪರಿಶೋಧನ ಅಧಿಕಾರಿ ಹಾಗೂ ತನಿಖಾಧಿಕಾರಿ ಬಣಕಾರ್ ಪ್ರಕಾಶ್ ಕುಮಾರ್ ಮತ್ತು ತಾಂತ್ರಿಕ ವಿಭಾಗದ ಸಹಾಯಕ ಇಂಜಿಯರ್ ತೇಜ.ಶ್ರಿ.ಮದ್ದೋಡಿ ಅವರು ತನಿಖೆ ನಡೆಸಿದ ವರದಿಯಲ್ಲಿ ಇಂದಬೆಟ್ಟು ಗ್ರಾಮಪಂಚಾಯತಿನ ಕಾಮಗಾರಿಗಳಲ್ಲಿ ಲೋಪಗಳಾಗಲು ಕಾರಣರಾದವರನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ ಅದರಂತೆ ಬೆಳ್ತಂಗಡಿ ಪಂಚಾಯತ್ ರಾಜ್ ಸಹಾಯಕ ಇಂಜಿನಿಯರ್ ಹರ್ಷಿತ್ , ಅಂದಿನ ಪಿಡಿಓ ಸವಿತಾ, ಇಂದಬೆಟ್ಟು ಗ್ರಾ.ಪಂ ಅಂದು ಅಧ್ಯಕ್ಷರಾಗಿದ್ದ ಅನಂದ.ಎ, ಹಾಗೂ ನಿವೃತ್ತ ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ಮೊಹಮ್ಮದ್ ಪಿ ಇವರು ನಾಲ್ಕು ಜನ ಕರ್ತವ್ಯ ಲೋಪ ಎಸಗಿರುವುದಾಗಿ ವರದಿ ನೀಡಿದ್ದು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ನಾಲ್ಕು ಜನರ ವಿರುದ್ಧ ಕ್ರಮ ಕೈಗೊಳ್ಳಲು ಆ.5 ರಂದು ವರದಿ ಸಲ್ಲಿಸಿದ್ದಾರೆ.

Spread the love
  • Related Posts

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    ಶಿಶಿಲ: ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆಯು 07/02/2026 ಶನಿವಾರದಿಂದ 10/02/2026ಮಂಗಳವಾರದವರೆಗೆ ನಡೆಯಲಿದೆ. Spread the love

    Spread the love

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಇನ್ಸಿಟ್ಯೂಟ್ ಆಫ್‌ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಕಂಪನಿ ಸೆಕ್ರೆಟರಿ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. 200 ಅಂಕಗಳ ಪರೀಕ್ಷೆಯಲ್ಲಿ 183 ಅಂಕಗಳನ್ನು…

    Spread the love

    You Missed

    ಉಜಿರೆಯ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ

    • By admin
    • February 1, 2026
    • 12 views
    ಉಜಿರೆಯ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಅವರಿಗೆ “ಆಯುಷ್ ಶ್ರೀ” ಪ್ರಶಸ್ತಿ

    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    • By admin
    • January 28, 2026
    • 69 views
    ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    • By admin
    • January 20, 2026
    • 310 views
    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ,  ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    • By admin
    • January 20, 2026
    • 105 views
    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    • By admin
    • January 18, 2026
    • 99 views
    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    • By admin
    • January 18, 2026
    • 90 views
    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???