ದೇಶಾದ್ಯಂತ ಮತ್ತೆ ಕೊರೋನಾ 2ನೇ ಅಲೆ ಅಬ್ಬರ ಒಂದೇ ದಿನದಲ್ಲಿ ದಾಖಲಾಯ್ತು 1,52,879 ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,52,879 ಕೊರೋನಾ ಪ್ರಕರಣ ವರದಿಯಾಗಿದೆ.

ಇನ್ನು ಒಂದೇ ಬರೋಬ್ಬರಿ 839 ಮಂದಿ ಬಲಿಯಾಗಿದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 1,69,275ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,08,087ಕ್ಕೆ ಏರಿಕೆಯಾಗಿದೆ.

READ ALSO

ಒಂದೇ ದಿನ 1,52,879 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,33,58,805ಕ್ಕೆ ತಲುಪಿದೆ. ಈವರೆಗೂ ಚೇತರಿಸಿಕೊಂಡವರ 1,20,81,443ಕ್ಕೆ ತಲುಪಿದೆ.

ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 10,15,95,147ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.