
ಬೆಂಗಳೂರು : ದ್ವಿಚಕ್ರ ವಾಹನ ಸವಾರರೇ ಇನ್ಮುಂದೆ ಬೈಕ್ ಗಳಲ್ಲಿ ಸೈಡ್ ಮಿರರ್, ಇಂಡಿಕೇಟರ್ ಇಲ್ಲದಿದ್ದರೆ 500 ರೂ. ದಂಡ ಕಟ್ಟಬೇಕಾಗುತ್ತದೆ.
ಹೌದು, ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ಚಲಾಯಿಸಬೇಕಾದರೆ ವಾಹನಕ್ಕೆ ಎರಡೂ ಬದಿಯಲ್ಲಿ ಕನ್ನಡಿ ಮತ್ತು ಇಂಡಿಕೇಟರ್ ಗಳಿರುವುದು ಕಡ್ಡಾಯವಾಗಿದ್ದು, ಇಲ್ಲವಾದರೆ 500 ರೂ. ದಂಡ ಪಾವತಿಸಬೇಕಾಗುತ್ತದೆ.
ದ್ವಿಚಕ್ರ ವಾಹನ ಸವಾರರು ಸೈಡ್ ಮೀರರ್ ಮತ್ತು ಇಂಡಿಕೇಟರ್ ಗಳನ್ನು ಬಳಸದೆ ಅಡ್ಡಾದಿಡ್ಡಿ ಚಲಾಯಿಸಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸರು ದ್ವಿಚಕ್ರ ವಾಹಹನಗಳಿಗೆ ಸೈಡ್ ಮಿರರ್ ಮತ್ತು ಇಂಡಿಕೇಟರ್ ಹೊಂದಿರದ ವಾಹನಗಳ ಸವಾರರಿಗೆ ದಂಡ ವಿಧಿಸುವುದಾಗಿ ಜಂಟಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.