ಹೊಸ ಆರ್ಥಿಕ ವರ್ಷದ ಪ್ರಾರಂಭ, ಇಂದಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತಮ್ಮ ಬಜೆಟ್‌ನಲ್ಲಿ ಘೋಷಿಸಿರುವ ಹಣಕಾಸು ನೀತಿಗಳು ಹಾಗೂ ಇನ್ನೂ ಅನೇಕ ನೀತಿಗಳು, ಪ್ರತಿ ವರ್ಷದಂತೆ ಈ ಬಾರಿಯೂ ಏ.1ರಿಂದ ಜಾರಿಗೆ ಬರುತ್ತಿವೆ. ಇವು ದೈನಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಲಿವೆ. ಏನೆಲ್ಲಾ ಬದಲಾವಣೆ ಆಗಲಿವೆ ಹಾಗೂ ಅವು ನಿತ್ಯದ ಜೀವನದಲ್ಲಿ ಏನೇನು ಪರಿಣಾಮ ಬೀರಲಿವೆ ಎಂಬ ಕುರಿತು ಇಲ್ಲಿದೆ ಮಾಹಿತಿ

.

ಇಂದಿನಿಂದ ಈ ಬದಲಾವಣೆ! ಟೋಲ್‌, ನೀರು, ವಾಣಿಜ್ಯ ವಿದ್ಯುತ್ ದರ ಹೆಚ್ಚಳ | ಷೇರುಪೇಟೆ ವಹಿವಾಟು ತುಟ್ಟಿ ₹12 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ | ಗ್ರಾಹಕ ಸ್ನೇಹಿ ಆದಾಯ ತೆರಿಗೆ ಕಾಯ್ದೆ ಜಾರಿ

12 ಲಕ್ಷ ರು. ವರೆಗೆ ಆದಾಯ ತೆರಿಗೆ ಇಲ್ಲ!

1961ರ ಆದಾಯ ತೆರಿಗೆ ಕಾಯ್ದೆ ರದ್ದಾಗಿ ಹೊಸ ಕಾಯ್ದೆ ಜಾರಿಗೆ NO TAX ಬರಲಿದೆ. ಸರಳ ಭಾಷೆ, ಪಾಲನೆಗೆ ಸುಲಭ, ಗ್ರಾಹಕರ ಸ್ನೇಹಿ ನಿಯ ಮಗಳನ್ನು ಹೊಸ ಕಾಯ್ದೆ ಒಳಗೊಂಡಿದೆ. ಹೊಸ ಆದಾಯ ತೆರಿಗೆ 12 ಲಕ್ಷ ವರೆಗೆ 10% ತೆರಿಗೆ ವಿಧಿಸಲಾಗುತ್ತದೆ. ಆದರೆ ವಿವಿಧ ರಿ ಯಾಯ್ತಿ, ವಿನಾಯ್ತಿ ಬಳಸಿ 12 ಲಕ್ಷವರೆಗೆ ಶೂನ್ಯ ತೆರಿಗೆ ವ್ಯಾಪ್ತಿಗೆ ಒಳಪಡಬಹುದು.

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ

ಬೆಂಗಳೂರು ಜಲಮಂಡಳಿ ನೀರಿನ ದರವನ್ನು ಶೇ.3ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಈ ಹಿಂದೆ ಕೈಗೊಂಡಿತ್ತು. ಈ ನಿರ್ಧಾರ ಏ.1ರಿಂದ ಜಾರಿಗೆ ಬರಲಿದೆ. ಇದರಿಂದ ಕನಿಷ್ಠ 12 ಲಕ್ಷ ಗೃಹ ಮತ್ತು ವಾಣಿಜ್ಯ ಬಳಕೆದಾರರು ಹೆಚ್ಚಿನ ಹೊರೆ ಹೊರಬೇಕಾಗಿ ಬರ ಲಿದೆ. ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ ಏರಿಕೆ ಶುಲ್ಕ ಏರಿಕೆ ಮಾಡಲಾಗುತ್ತಿದೆ. ಇನ್ನು ಕಸ ವಿಂಗಡಣೆ ಮಾಡದಿದ್ದರೆ ದಂಡ ಹಾಕಲಾಗುತ್ತದೆ.

ಷೇರುಪೇಟೆ ವಹಿವಾಟು ಇನ್ನಷ್ಟು ತುಟ್ಟಿ

ಸೆಕ್ಯುರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಹೆಚ್ಚಿಸಿರುವ ಪರಿಣಾ ಮ ಅಪ್ಪನ್ (ಪ್ರೀಮಿಯಂ) ಶುಲ್ಕ ಶೇ.0.1 ರಿಂದ ಶೇ.0.15ಕ್ಕೆ, ಪ್ರೊ.ಚರ್ಸ್ ಶುಲ್ಕ ಶೇ.0.02ರಿಂದ ಶೇ.0.05 ಹೆಚ್ಚಳವಾಗಲಿದೆ. ಇದುವರೆಗೆ ಕೇವಲ ಆಧಾರ್ ದೃಢೀಕರಿಸುವ ಮೂಲಕ ಹೊಸ ಪಾನ್ ಪಡೆಯಬಹುದಿತ್ತು. ಆದರೆ ಏ.1ರಿಂದ ಹೆಚ್ಚುವರಿ ದಾಖಲೆ ಸಲ್ಲಿಸಬೇಕು. ಜೊತೆಗೆ ಆಧಾರ್‌ನಲ್ಲಿ ಇರುವಂತೆಯೇ ಪಾನ್‌ನಲ್ಲೂ ಹೆಸರು ಬರಲಿದೆ.

7ರಿಂದ10 ಲಕ್ಷ+ ಠೇವಣಿಗೆ ಪಾನ್ ಕಡ್ಡಾಯ

ಒಂದು ವರ್ಷದಲ್ಲಿ 10 ಲಕ್ಷ ರು.ಗಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ ಆಗ ಪಾನ್ ನಂಬರ್ ಸಲ್ಲಿಕೆ ಕಡ್ಡಾಯವಾಗಲಿದೆ. ಜತೆಗೆ 5 ಲಕ್ಷ ಮೇಲ್ಪಟ್ಟ ವಾಹನ ಖರೀದಿ, 20 ಲಕ್ಷ ರು. ಮೇಲ್ಪಟ್ಟ ಆಸ್ತಿ ಖರೀದಿ ವಹಿವಾಟಿಗೂ ಪಾನ್ ಸಲ್ಲಿಕೆ ಇನ್ನು ಕಡ್ಡಾಯವಾಗಿರಲಿದೆ. ಈ ಹೊಸ ನಿಯಮವು ಮಧ್ಯಮ ವರ್ಗ ಅಥವಾ ಬಡ ವರ್ಗದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ಸಿರಿವಂತರ ಮೇಲೆ ಪರಿಣಾಮ ಬೀರಲಿದೆ.

ವಾಣಿಜ್ಯ ವಿದ್ಯುತ್ ಶುಲ್ಕ, ಟೋಲ್ ಏರಿಕೆ

ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಘೋಷಿಸಲಾದ ಹೊಸ ವಿದ್ಯುತ್ ದರ ಏ.1ರಿಂದ ಜಾರಿಗೆ ಬರಲಿದೆ. ಹೀಗಾಗಿ ಈ ವಲಯ ದ ಗ್ರಾಹಕರು ಹೆಚ್ಚಿನ ವಿದ್ಯುತ್ ಶುಲ್ಕ ಪಾವತಿಸಬೇಕಾಗಿ ಬರಲಿದೆ. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ದರ ಶೇ.3ರಿಂದ ಶೇ.5ರವರೆಗೆ ಹೆಚ್ಚಳವಾಗಲಿದೆ. ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ ವಾರ್ಷಿಕವಾ ಪಾಸ್ ದರ 75 ಹೆಚ್ಚಳ ಆಗಲಿದೆ. ಇದರಿಂದ ಪಾಸ್ ದರ ಕ3000 ನಿಂದ 3075ಕ್ಕೇರಲಿದೆ.

ಬ್ಯಾಂಕಲ್ಲಿನ್ನು ಬೆಳ್ಳಿ ಮೇಲೂ ಸಾಲ ಸಿಗತ್ತೆ

ಚಿನ್ನ ಅಡ ಇಟ್ಟು ಸಾಲ ಪಡೆಯುವಂತೆ ಬೆಳ್ಳಿ ಗಟ್ಟಿ, ನಾಣ್ಯ, ಆಭರಣ ಅಡ ಇಟ್ಟು ಸಾಲ ಪಡೆಯುವ ಅವಕಾಶ ಇನ್ನು ಸಿಗಲಿದೆ. ಆದ ರೆ ಆರಂಭಿಕ ಹಂತದಲ್ಲಿ ಇದು ಆಯ್ದ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸೀಮಿತವಾಗಿರಲಿದೆ. ಏನೇ ಆದರೂ ಬೆಳ್ಳಿಯನ್ನು ಅಡ ಇಟ್ಟು ಸಾಲ ಪಡೆಯುವ ಹೊಸ ನಿಯಮ ಏ.1ರಿಂದ ಜಾರಿ ಆಗುವ ಕಾರಣ ಸಾಲ ಬಯಸುವ ಅನೇಕ ಜನರಿಗೆ ನೆರವಾಗಲಿದೆ.

ಎಟಿಎಂ ಶುಲ್ಕ ₹21ನಿಂದ ₹23ಗೆ ಹೆಚ್ಚಳ

ATM ಖಾಸಗಿ ವಲಯದ ವಿವಿಧ ಬ್ಯಾಂಕ್ಗಳು ಗರಿಷ್ಠ ಉಚಿತ ಮಿತಿಯಾ ದ 3-5 ಗಡಿ ದಾಟಿದ ಬಳಿಕ ಪ್ರತಿ ವಹಿವಾಟಿಗೂ ವಿಧಿಸುವ ಶುಲ್ಕ ವನ್ನು 21 ನಿಂದೇ 23 ಗೆ ಹೆಚ್ಚಿಸಲಿವೆ. ಯುಪಿಐ ಬಳಸಿ ಎಟಿಎಂಗ ಳಿಂದ ಹಣ ಹಿಂಪಡೆಯುವುದು ಇನ್ನು ಮಾಸಿಕ ಉಚಿತ ವಿತ್‌ ಡ್ರಾ ವಲ್ ವ್ಯಾಪ್ತಿಗೆ ಒಳಪಡಲಿದೆ. ಹೀಗಾಗಿ ಕಾರ್ಡ್, ಯುಪಿಐ ಬಳಸಿ ಮಾಡುವ 3-5ರ ಮಿತಿ ದಾಟಿದರೆ ಪ್ರತಿ ವಹಿವಾಟಿಗೂ ₹23 ಶುಲ್ಕ ವಿಧಿಸಲಾಗುವುದು

ಟೋಲ್‌ಗಳಲ್ಲಿ ಇನ್ನು ನಗದು ಸ್ವೀಕರಿಸಲ್ಲ

ಟೋಲ್‌ಬೂತ್‌ಗಳಲ್ಲಿ ಈಗಾಗಲೇ ಫಾಸ್ಟಾಗ್ ವ್ಯವಸ್ಥೆ ಜಾರಿಗೆ ಬಂದಿದ್ದು, ಕೆಲವು ಸಂದರ್ಭಗಳಲ್ಲಿ ನಗದು ಸ್ವೀಕರಿಸಲಾಗುತ್ತಿತ್ತು. ಆದರೆ ಏ.1ರಿಂದ ದೇಶದ 1150 ಟೋಲ್‌ಗಳಲ್ಲಿ ನಗದು ಸ್ವೀಕಾರ ನಿಲ್ಲಲಿದೆ. ಕೇವಲ ಫಾಸ್ಟಾಗ್ ಮತ್ತು ಯುಪಿಐ ಮೂಲಕ ಹಣ ಪಾವತಿಸಬಹುದು. ಒಂದು ವೇಳೆ ಯುಪಿಐ ವ್ಯವಸ್ಥೆ ಕೂಡ ವಾಹನ ಚಾಲಕರ ಬಳಿ ಇರದಿದ್ದರೆ ಸಂಚಾರಕ್ಕೆ ಅವಕಾಶ ನೀಡಲ್ಲ.

Spread the love
  • Related Posts

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಬೆಂಗಳೂರು: ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಕಾನೂನು ಬಾಹಿರವಾಗಿ ಬಂಧನಗಳನ್ನು ನಡೆಸುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯವು (High court of Karnataka) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಐತಿಹಾಸಿಕ ತೀರ್ಪು ನೀಡಿದೆ. ಹೈಕೋರ್ಟ್‌ನ ಈ…

    Spread the love

    ಸೌಜನ್ಯ ಪ್ರಕರಣ ಮರು ತನಿಖೆಗೆ ಎಸ್‌ಐಟಿ ರಚನೆ ಎನ್. ಶಶಿಕುಮಾರ್ ಐಪಿಎಸ್ ನೇತೃತ್ವದಲ್ಲಿ ಐವರು ಸದಸ್ಯರ ತಂಡ

    ಬೆಂಗಳೂರು, ಸೆ.24: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ Special Leave Petition (Crl.) No.5763 of 2026ರ ವಿಚಾರಣೆಯ ಹಿನ್ನೆಲೆಯಲ್ಲಿ, ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ. ಎಸ್‌ಐಟಿ ತಂಡದ…

    Spread the love

    You Missed

    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    • By admin
    • September 30, 2026
    • 3 views
    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    • By admin
    • September 28, 2026
    • 9 views
    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    • By admin
    • September 28, 2026
    • 9 views
    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    • By admin
    • September 27, 2026
    • 16 views
    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    • By admin
    • September 25, 2026
    • 15 views
    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ  ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ

    • By admin
    • September 25, 2026
    • 11 views
    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ