ಮಧುರೈ: ಮಧುರೈನ ಕುಟುಂಬವೊಂದು ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಕ್ಯೂಆರ್ ಕೋಡ್ ಹಾಕಿಸಿ ಗಮನ ಸೆಳೆದಿದೆ.
ಕೊರೊನಾ ಬಂದು ಜನರ ಜೀವನ ಶೈಲಿಯನ್ನ ಬದಲಾಯಿಸಿಬಿಟ್ಟಿದೆ. ಮದುವೆಗಳಲ್ಲಿ ವಧುವರರಿಗೆ ಉಡುಗೊರೆ ಕೊಡೋ ರೀತಿ ಕೂಡ ಬದಲಾಗ್ತಿದೆ. ನವ ವಧು-ವರರು ತಮ್ಮ ಪ್ರೀತಿ ಪಾತ್ರರಿಂದ ಉಡುಗೊರೆ ತೆಗೆದುಕೊಳ್ಳಲು ಹೊಸ ಹೊಸ ಐಡಿಯಾ ಪ್ರಸ್ತುತಪಡಿಸ್ತಿದ್ದಾರೆ.
ಒಟ್ಟು 30 ಜನರು ಈ ಸೌಲಭ್ಯವನ್ನ ಬಳಿಸಿಕೊಂಡಿದ್ದು, ನವದಂಪತಿಗೆ ಹಣವನ್ನ ಟ್ರಾನ್ಸ್ಫರ್ ಮಾಡಿ ಮುಯ್ಯಿ ನೀಡುವ ಮೂಲಕ ಜೋಡಿಗೆ ಹಾರೈಸಿದ್ದಾರೆ. ಮದುವೆ ಹಾಜರಾಗಲು ಸಾಧ್ಯವಾಗದ ಆಪ್ತರು ಕೂಡ ಕ್ಯೂಆರ್ ಕೋಡ್ ಮೂಲಕ ಹಣ ನೀಡಿದ್ದಾರೆ ಅಂತ ವರದಿಯಾಗಿದೆ.
ಕೊರೊನಾ ಸಂಕಷ್ಟದ ಬಳಿಕ ನಿಧಾನವಾಗಿ ಅದ್ಧೂರಿ ಮದುವೆ ಸಮಾರಂಭಗಳು ಆಯೋಜನೆಯಾಗುತ್ತಿದ್ದು, ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಮದುವೆ ಡೆಕೋರೇಷನ್ ಹಾಗೂ ಕೇಟರಿಂಗ್ಗೆ ಅರ್ಡರ್ ಬರುತ್ತಿದೆ ಎಂದು ಇವೆಂಟ್ ಮ್ಯಾನೇಜರ್ವೊಬ್ಬರು ತಿಳಿಸಿದ್ದಾರೆ.