ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡು ಬಂದ ಕಾಡಾನೆ ಹಿಂಡು, ತೋಟದಲ್ಲೇ ಬಾಕಿಯಾದ ಮರಿಯಾನೆ

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಚ್ಚೂರು ಎಂಬಲ್ಲಿ ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಮರಿ ಆನೆಯೊಂದು ತೋಟದಲ್ಲಿ ಉಳಿದ ಘಟನೆ ವರದಿಯಾಗಿದೆ.

ರಾತ್ರಿ ವೇಳೆಯಲ್ಲಿ ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ಆನೆಗಳ ಹಿಂಡು ನುಗ್ಗಿದ್ದು, ಅಡಕೆ ತೋಟ ಹಾಗೂ ಇತರ ಕೃಷಿಗಳಿಗೆ ಹಾನಿ ಮಾಡಿವೆ.

READ ALSO

ಈ‌ ಸಂದರ್ಭ ಹಿಂಡಿನಲ್ಲಿದ್ದ ಮರಿ ಆನೆ ತೋಟದಲ್ಲೇ ಉಳಿದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಹಾಗೂ‌ ಸಿಬ್ಬಂದಿ ಸ್ಥಳಕ್ಕೆ ತೆರಳಿ‌ದ್ದು, ಮರಿ ಆನೆಯ ರಕ್ಷಣಾ ಕಾರ್ಯ ನಡೆಸಿದ್ದಾರೆ.