ಶ್ರೀನಗರ:ಇಲ್ಲಿನ ಜಮ್ಮು ಕಾಶ್ಮೀರದ ಖಾಜಿಗುಂಡ್ ಪ್ರದೇಶದಲ್ಲಿ ಕಳೆದ ರಾತ್ರಿ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ ಮೂವರು ಸ್ಥಳೀಯ ಬಿಜೆಪಿ ನಾಯಕರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.ಭಾರತೀಯ ಜನತಾ ಪಕ್ಷದ ಸ್ಥಳೀಯ ನಾಯಕರಾದ ಫಿದಾ ಹುಸೇನ್ ಯಾತೋ, ಉಮರ್ ರಂಜಾನ್ ಹಾಜನ್ ಮತ್ತು ಉಮರ್ ರಶೀದ್ ಬೇಗ್ ಎಂಬ ಮೂವರು ಉಗ್ರರ ಗುಂಡಿನ ದಾಳಿಯಲ್ಲಿ ಸಾವೀಗೀಡಾಗಿದ್ದಾರೆ.
ಇವರಲ್ಲಿ ಫಿದಾ ಹುಸೇನ್ ಯಾತೋ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದು, ಉಳಿದ ಇಬ್ಬರು ಕಾರ್ಯಕರ್ತರು ಎಂದು ವರದಿಯಾಗಿದೆ. ಮೂವರು ನಾಯಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಗುಂಡಿನ ದಾಳಿ ನಡೆಸಿದ ದಾಳಿಕೋರರು ಆಲ್ಟೊ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.