ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೆಐಒಎಸ್ ಕೆ ಸೇವಾ ಕೇಂದ್ರಕ್ಕೆ ಚಾಲನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಳದ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿ ಗೃಹದಲ್ಲಿ ಕೆಐಒಎಸ್ ಕೆ ಸೇವಾ ಕೇಂದ್ರ (ಸೇವಾ ರಶೀದಿ ವಿತರಿಸುವ ಯಂತ್ರ) ಉದ್ಘಾಟಿಸಲಾಯಿತು.

ಇದು ಸ್ವಯಂ ಚಾಲಿತ u. P. I. Phonepay, google pay, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, bhim app ಹೀಗೆಲ್ಲ ವಿಧದ ಆನ್ಲೈನ್ ಸೇವೆಯನ್ನು ಸ್ವಯಂ ಪ್ರೇರಿತವಾಗಿ ಮಾಡಿದ್ದಾರೆ ಕೆಲವೇ ಸೆಕೆಂಡ್ನಲ್ಲಿ ಸೇವೆಯ ಚೀಟಿಯನ್ನು ಎಲ್ಲರೂ ಪಡೆಯಬಹುದು.

READ ALSO

ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು ಸಹಕಾರಿಯಾಗಲಿದೆ ಹಾಗೂ ಭಕ್ತರು ನೇರವಾಗಿ ತಮ್ಮಅಪೇಕ್ಷೆಯ ಸೇವೆಗಳ ರಶೀದಿ ಪಡೆದು ಬಳಿಕ ಸರತಿ ಸಾಲಿನಲ್ಲಿ ಬಂದು ಸ್ವಾಮಿ ದರ್ಶನ ಪಡೆಯಬಹುದು. ಇದರಿಂದ ಭಕ್ತಾದಿಗಳಿಗೆ ಸಮಯದ ಉಳಿತಾಯವಾಗಲಿದೆ.

ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ಷೇತ್ರದ ಇನ್ನೊಂದು ಹೆಜ್ಜೆ ಇದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹೇಮಾವತಿ ವಿ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರಣ್ ವರ್ಮ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ದೇವಳ ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್, ಮಲ್ಲಿನಾಥ್ ಜೈನ್ , ಚಂದ್ರಕಾಂತ, ನವೀನ್, ಕೆಐಒಎಸ್ ಕೆ ನ ಅಭಿವೃದ್ದಿ ತಂಡ, ಧರ್ಮಸ್ಥಳ ಬ್ಯಾಂಕ್ ಆಫ್ ಬರೋಡದ ವಿಜಯಪಾಟೀಲ್, ಕಿರಣ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.