ಶ್ರೀ ದುರ್ಗಾ ಕಾಳಿಕಾಂಬಾ ಕ್ಷೇತ್ರ ಕಾಳಿಬೆಟ್ಟ ಸವಣಾಲಿನಲ್ಲಿ ಇಂದಿನಿಂದ ನವರಾತ್ರಿ ಉತ್ಸವ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸವಣಾಲು ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ವು ದಿನಾಂಕ 15/10/2023 ನೇ ರವಿವಾರದಿಂದ 24/10/2023ನೇ ಮಂಗಳವಾರದವರೆಗೆ ನಡೆಯಲಿದೆ.

ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ವಿಶೇಷ ಪೂಜೆ ನಡೆಯಲಿದ್ದು, 24/10/2023, ಮಂಗಳವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು.

READ ALSO

20/10/2023ರಂದು ಶಾರದಾ ಪೂಜೆ , 22/10/2023, ರವಿವಾರ ದಂದು ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು.

23/10/2023, ಸೋಮವಾರದಂದು ಬೆಳಗ್ಗೆ 08:00ರಿಂದ 10:00 ರವರೆಗೆ ಅಕ್ಷರಾಭ್ಯಾಸ, ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.

ತಾ. 24/10/2023, ಮಂಗಳವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು.