ಮಡ್ ಪೈಪ್ ಕೃಪೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ದಗದಗಿಸಿದ ಕಟ್ಟಡ ನೌಕರರು, ಗ್ರಾಹಕರು ಅಪಾಯದಿಂದ ಪಾರು

ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಮಡ್‌ಪೈಪ್ ಪಬ್‌‌ನಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದೆ.

ಅಗ್ನಿಶಾಮಕ ದಳದ ಎಂಟು ವಾಹನಗಳು‌ ಸ್ಥಳದಲ್ಲಿ ಬೀಡುಬಿಟ್ಟಿದ್ದು ಬೆಂಕಿ ನಂದಿಸಿವೆ.‌ ಬೆಂಕಿ ಬಹುತೇಕ ಹತೋಟಿಗೆ ಬಂದಿದೆ.ಸಿಲಿಂಡರ್ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

READ ALSO

ಕಟ್ಟಡದಿಂದ ಹಾರಿದ ಯುವಕ

ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿದ್ದ ಕಾಫಿ ಕೆಫೆಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ಈಗ ಬೆಂಕಿ ಸಂಪೂರ್ಣ ‌ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕದ ದಳದ ಅಧಿಕಾರಿಗಳು ತಿಳಿಸಿದರು. ನಾಲ್ಕು ಅಂತಸ್ತಿನ ಕಟ್ಟಡ ಇದಾಗಿದೆ.

ಪ್ರಾಣ ಉಳಿಸಿಕೊಳ್ಳಲು ಯುವಕನೊಬ್ಬ ಕಟ್ಟಡದಿಂದ ಜಿಗಿದಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಕಟ್ಟಡದಿಂದ ಹೊರಬಂದು ಪಾರಾಗಿದ್ದಾರೆ.