ಮನುಷ್ಯನ ಕ್ರೂರ ಕೃತ್ಯಕ್ಕೆ ಕಾಮದೇನು ಬಲಿ! ನಾಡಬಾಂಬ್ ತಿಂದು ನರಳಾಡಿ ಪ್ರಾಣ ಬಿಟ್ಟ ಗೋ ಮಾತೆ!

ಕೋಲಾರ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹೊಸೂರಿನಲ್ಲಿ ಕಾಡು ಹಂದಿಯ ಬೇಟೆಗಾಗಿ ಇಟ್ಟಿದ್ದಂತ ನಾಡ ಬಾಂಬ್ ನ್ನು ಹಸುವೊಂದು ತಿಂದಿದ್ದರಿಂದಾಗಿ, ಅದರ ಬಾಯಿ ಚಿದ್ರಗೊಂಡು, ಗಂಭೀರವಾಗಿತ್ತು. ಕೊನೆಗೆ ನರಳಿ ನರಳಿ ಹಸು ಸಾವನ್ನಪ್ಪಿದೆ.

ಈ ಅಮಾನವೀಯ ಘಟನೆ ಕೋಲಾರದಲ್ಲಿ ವರದಿಯಾಗಿದ್ದು ಹಸು ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ್ದು ಮೇಯಲು ಹೋದಂತ ಸಂದರ್ಭದಲ್ಲಿ, ಕಾಡು ಹಂದಿ ಬೇಟೆಗಾಗಿ ಕೇಪ್ ಉಂಡೆ ಇಟ್ಟಿದ್ದನ್ನು ಹುಲ್ಲಿನೊಂದಿಗೆ ತಿಂದಿದೆ. ಹೀಗೆ ತಿಂದಿದ್ದರಿಂದಾಗಿ ಹಸುವಿನ ಬಾಯಿ ಚಿತ್ರಗೊಂಡು, ತೀವ್ರ ರಕ್ತಸ್ರಾವವಾಗಿ, ಸಾವನ್ನಪ್ಪಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಬಂಗಾರ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

READ ALSO