ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಈ ವರ್ಷದ ಕಂಬಳಗಳ ಸಂಭಾವ್ಯ ಪಟ್ಟಿಯನ್ನು ಸಿದ್ದಪಡಿಸಿದ್ದು , ಮುಂದಿನ ಮಹಾಸಭೆಯಲ್ಲಿ ಅಂತಿಮಗೊಳಿಸಿ ಅಂತಿಮಪಟ್ಟಿಯನ್ನು ಬಿಡುಗಡೆಗೊಳಿಸಲಿದೆ.
ಪಟ್ಟಿಯ ಪ್ರಕಾರ ಮೊದಲ ಕಂಬಳವು ಮೂಡುಬಿದಿರೆಯಲ್ಲಿ 27ರಂದು ನಡೆಯಲಿದ್ದು, ಡಿ. 11ರಂದು ಹೊಕ್ಕಾಡಿ, ಡಿ. 18 ಮಂಗಳೂರು, ಡಿ. 26ರಂದು ಮುಲ್ಕಿ, 2022ರ ಜ. 1ರಂದು ಕಕ್ಕೆಪದವು, ಜ. 8ರಂದು ಅಡ್ವೆ ನಂದಿಕೂರು, ಜ. 16ರಂದು ಮಿಯಾರು, ಜ.22ರಂದು ಪುತ್ತೂರು, ಜ. 29ರಂದು ಐಕಳ, ಫೆ. 5ರಂದು ಬಾರಾಡಿ, ಫೆ. 12ರಂದು ಜಪ್ಪು, ಫೆ. 19ರಂದು ವಾಮಂಜೂರು, ಫೆ. 26ರಂದು ಪೈವಳಿಕೆ, ಮಾ. 5ರಂದು ಕಟಪಾಡಿ, ಮಾ. 12ರಂದು ಉಪ್ಪಿನಂಗಡಿ, ಮಾ. 19ರಂದು ಬಂಗಾಡಿ, ಮಾ. 26ರಂದು ವೇಣೂರು ಕಂಬಳ ನಡೆಸುವ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಅಂತಿಮ ಪಟ್ಟಿಯನ್ನುಅಕ್ಟೋಬರ್ 30ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ