ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕೌಡಂಗೆ ನಿವಾಸಿ ಅವಿನಾಶ್ ಗೌಡ (23ವ.) ಎಂದು ಗುರುತಿಸಲಾಗಿದೆ.
ಕೌಡಂಗೆ ನಿವಾಸಿ ಕೃಷಿಕ ಚನನ ಗೌಡರ ಪುತ್ರರಾಗಿರುವ ಅವಿನಾಶ್ ರವರು ಮೇಸ್ತ್ರಿ ಕೆಲಸ ಮಾಡುತ್ತಿದ್ದರು.
ಈ ದುರ್ಘಟನೆ ನಡೆದ ಕೂಡಲೇ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮದ್ಯೆ ಮೃತಪಟ್ಟಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ ಸಕ್ರೀಯ ಕಾರ್ಯಕರ್ತರಾಗಿದ್ದ ಅವಿನಾಶ್ ಗೌಡ ರವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ತಂದೆ, ತಾಯಿ ಇಬ್ಬರು ಸಹೋದರಿಯರು, ಮತ್ತು ಸಹೋದರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.