ಮನಸ್ಸಿನ ಪವಿತ್ರತೆಯನ್ನು ಹೆಚ್ಚಿಸಲು ದೇವರ ನಾಮ ಸ್ಮರಣೆ ಅಗತ್ಯ, ಪ್ರತಿ ಮನೆ ಮನಗಳಲ್ಲಿ ಶ್ರೀರಾಮ ನಾಮ ಜಪಿಸಲಿ : ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬೆಳ್ತಂಗಡಿ : ಮನಸ್ಸಿನ ಪವಿತ್ರತೆಯನ್ನು ಹೆಚ್ಚಿಸಲು ದೇವರ ನಾಮ ಸ್ಮರಣೆ ಅಗತ್ಯ. ಇದರಿಂದ ಮನಸ್ಸು ಶುದ್ಧವಾಗಲು ಸಾಧ್ಯ. ನಿಷ್ಠೆಯಿಂದ ಧರ್ಮಪಾಲನೆ ಮಾಡುವವರಿಗೆ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ. ರಾಮ ಎಂಬ ಶಬ್ದ ನಮ್ಮ ಜೀವನಾಡಿ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀರಾಮ ನಾಮ ಜಪಿಸಲಿ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.


ಅವರು ಬುಧವಾರ ಕನ್ಯಾಡಿ ದೇವರಗುಡ್ಡೆ ಮಠದಲ್ಲಿ ಶ್ರೀರಾಮಚಂದ್ರ ಪರಿವಾರ ಮೂರ್ತಿಗಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ ನೆರವೇರಿಸಿದ ಬಳಿಕ ಆಶಿರ್ವಚನ ನೀಡುತ್ತ ಶತಕೋಟಿ ಭಕ್ತರ ಪ್ರಾರ್ಥನೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂದಿತ್ತು. ಪ್ರಭು ಶ್ರೀರಾಮಚಂದ್ರನ ಅನುಗ್ರಹ ಇದ್ದರೆ ಎಲ್ಲವೂ ಸಾಧ್ಯ ಎಂಬಂತೆ ಮರೆಯಾಗಿದ್ದ ಅಯೋಧ್ಯೆ ಇಂದು ಮತ್ತೆ ನಿರ್ಮಾಣಗೊಳ್ಳುತ್ತಿರುವುದು ದೇಶದ ಜಗತ್ತಿನ ಶಾಂತಿ, ನೆಮ್ಮದಿಗೆ ದಾರಿ ತಂದುಕೊಂಡಂತೆ. ಶ್ರೀರಾಮನ ಮನಸ್ಸಿನಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ಪವಿತ್ರತೆ ಅಡಗಿದೆ. ಅದನ್ನು ನಾವು ಸದುಪಯೋಗಪಡಿಸಬೇಕೆ ವಿನಃ ಇನ್ನೊಬ್ಬರು ದುರ್ಬಳಕೆ ಮಾಡದಂತೆ ಜಾಗೃತಗೊಳಿಸಬೇಕು. ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿದ್ದರೆ ಆರೋಗ್ಯಕ್ಕೂ ನೆಮ್ಮದಿ, ಮನಸ್ಸಿಗೂ ನೆಮ್ಮದಿ ಎಂದರು.

READ ALSO


ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ಚಿತ್ತರಂಜನ್ ಗರೋಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಡಾ| ಎಂ.ಎಂ ದಯಾಕರ್, ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ, ಸಾರಿಗೆ ಇಲಾಖಾ ಅಧಿಕಾರಿ ಚರಣ್, ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಉದ್ಯಮಿ ರವಿಪೂಜಾರಿ ಬರಮೇಲು, ಕೃಷ್ಣಪ್ಪ ಗುಡಿಗಾರ್, ಟ್ರಸ್ಟಿ ತುಕರಾಮ್ ಸಾಲಿಯಾನ್, ಬಿಎಸ್‍ಎನ್‍ಎಲ್ ನಿವೃತ್ತ ಅಧಿಕಾರಿ ಅಣ್ಣಿ ಪೂಜಾರಿ, ಯೂತ್ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖಾ ಸಹಾಯಕ ಕಮಿಷನರ್ ರಾಜು ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.