ಸೇವಾ ಭಾರತಿ ಕನ್ಯಾಡಿಗೆ “ಅತ್ಯುತ್ತಮ ಸೇವೆ ಸಲ್ಲಿಸಿರುವ ಸಂಸ್ಥೆ” ರಾಜ್ಯ ಪ್ರಶಸ್ತಿ ಪುರಸ್ಕಾರ

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಕನ್ಯಾಡಿಯ ಸೇವಾ ಭಾರತಿ ಸಂಸ್ಥೆಗೆ ಕರ್ನಾಟಕ ರಾಜ್ಯ ಸರಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಇಲಾಖೆ ವಿಶ್ವ ವಿಕಲಚೇತನರ ದಿನಾಚರಣೆ 2022 ಅಂಗವಾಗಿ ನೀಡುವ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಯಾಗಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಡಿ.3ರಂದು ಸಂಘದ ಸಂಸ್ಥಾಪಕ ವಿನಾಯಕ ರಾವ್ ಕನ್ಯಾಡಿ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಸ್ವೀಕರಿಸಿದರು.

ಸರ್ಕಾರೇತರ ಸಂಸ್ಥೆಯಾಗಿ 2004 ರಲ್ಲಿ ಸೇವಾಭಾರತಿ ಆರಂಭವಾಯಿತು. ಕಳೆದ 18 ವರ್ಷಗಳಿಂದ ಆರೋಗ್ಯ ಮಹಿಳಾ ಸಬಲೀಕರಣ, ಸ್ವಉದ್ಯೋಗದ ಮೂಲಕ ದಿವ್ಯಾಂಗರ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವಾಕಾರ್ಯ ಹಾಗೂ ಸೇವೆಗಳಲ್ಲಿ ಸಮುದಾಯ ಸಕ್ರಿಯವಾಗಿ ತೊಡಗಿಕೊಂಡಿರುತ್ತದೆ. 2018 ರಿಂದ ಬೆನ್ನುಹುರಿ ಮುರಿತಕ್ಕೊಳಗಾದ ದಿವ್ಯಂಗರ ಸೇವಾದಾಮ ಹೆಸರಿನ ಪುನಃಶ್ವೇತನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಸಂಸ್ಥೆಯು 500ಕ್ಕಿಂತಲೂ ಅಧಿಕ ಬೆನ್ನು ಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸಿ, ಇದರಲ್ಲಿ ಸುಮಾರು 150 ಮಂದಿಗೆ ಪುನಃಶ್ಚತನವನ್ನು ನೀಡಿದೆ.

READ ALSO

ಸೌತಡ್ಕದಲ್ಲಿ ಸೇವಾದಾಮ: 2018 ರಿಂದ ಸೇವಾ ಭಾರತೀಯ ಸಹ ಸಂಸ್ಥೆಯಾಗಿ 30 ಲಕ್ಷ ಹೂಡಿಕೆಯೊಂದಿಗೆ ಹಾಗೂ 50 ಲಕ್ಷ ವಾರ್ಷಿಕ ವೆಚ್ಚವಿರುವ ಸಂಸ್ಥೆ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್(ರಿ) ಕೊಡಮಾಡಿರುವ ಬಾಡಿಗೆ ರಹಿತ ಕಟ್ಟಡದಲ್ಲಿ ಸೇವೆ ನೀಡುತ್ತಿದೆ.