ಅಳಿಯುವ ಕಾನನ… ಉಳಿಸುವ ಯಜಮಾನ.. ವನದೇವಿಯ ಪೋಷಣೆಗೆ ನಿಂತ ಪ್ರಕೃತಿ ಪುತ್ರ

🖊️• ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ (ರಿ)

ವನದೇವಿ ಅಳುತ್ತಿದ್ದಾಳೆ ಯಾಕೆಂದರೆ ಆಳುವ ಅರಸರು ಆಕೆಗೆ ಮಾನಸಿಕ ಹಿಂಸೆ ನೀಡುತ್ತಾ ಆಳುತ್ತಿದ್ದಾರೆ. ಅಡವಿಯ ಒಳಗಿಂದ ‘ ಭದ್ರವಾಗಿದ್ದ ನಾನು ಛಿದ್ರ ವಾಗುತ್ತಿದ್ದೇನೆ ‘ ಎಂಬ ಒಂದು ಕೂಗು ಕೇಳುತ್ತಿದೆ. ವನ ದೇವಿಯ ಈ ರೋದನಕ್ಕೆ ಕಿವಿಯಾಗಿ ತನ್ನ ಸ್ವಂತ ಜಾಗವನ್ನೇ ಅಡವಿಯನ್ನಾಗಿ ಮಾಡಲು ಹೊರಟವರು ನಿಜಕ್ಕೂ ಧನ್ಯರು. ಸಾಮಾನ್ಯವಾಗಿ ಒಂದಿಷ್ಟು ಸ್ವಂತ ಜಾಗ ಇದ್ದರೆ ಅದರಲ್ಲಿ ಹಣ ಮಾಡುವಂತಹ ಬೆಳೆ ಬೆಳೆಸುವ ವ್ಯಾವಹಾರಿಕ ದೃಷ್ಟಿ ಕೋನ ಇಡುವಂತ ಮನಸುಗಳು ಸಾಕಷ್ಟಿರಬಹುದು. ಆದರೆ ತನ್ನ ಸ್ವಂತ ಒಂದು ಎಕರೆ ಗಿಂತಲೂ ಹೆಚ್ಚು ಜಾಗದಲ್ಲಿ ಒಂದು ಸುಂದರವಾದ ಹಸಿರು ವನವನ್ನು ನಿರ್ಮಾಣ ಮಾಡುವ ತನ್ನ ಬಹುಕಾಲದ ವಿಶಿಷ್ಟ ಕನಸನ್ನು ನನಸು ಮಾಡಿ ಸಾಧಿಸಿ ತೋರಿಸಿದವರು ನಮ್ಮ ಆತ್ಮೀಯ ಮಿತ್ರ, ಪ್ರಕೃತಿ ಪುತ್ರ ಬೆಳ್ತಂಗಡಿ ಮುಂಡಾಜೆ ಯ ಸಚಿನ್ ಭಿಡೆ.


ದೇಶ ಸೇವೆ, ಪ್ರಕೃತಿ ಸೇವೆ, ತಾಯಿ ಸೇವೆ ಇವೆಲ್ಲವನ್ನೂ ಒಂದೇ ಚೌಕಟ್ಟಿನ ಒಳಗೆ ಮಾಡಿ ಅದು ನಿರಂತರ ಈ ದೇಶಕ್ಕೆ, ಪ್ರಕೃತಿಗೆ ಕೊಡುಗೆ ನೀಡುವಂತಾಗಬೇಕು ಎಂಬ ಸಚಿನ್ ರವರ ಪರಿಕಲ್ಪನೆಗೆ ಹೊಳೆದಾಗ ಅಭಿವ್ಯಕ್ತ ಗೊಂಡದ್ದು ‘ ಕಾರ್ಗಿಲ್ ವನ ‘ ಎಂಬ ಅಡವಿ ನಿರ್ಮಾಣ. ಕಾರ್ಗಿಲ್ ಹುತಾತ್ಮರ ( ಜೂನ್ 26 ಕಾರ್ಗಿಲ್ ಹುತಾತ್ಮರ ದಿನಾಚರಣೆ ) ಸ್ಮರಣಾರ್ಥ ತನ್ನ ತೋಟದ ಸಮೀಪದಲ್ಲೇ ಇದ್ದ ಜಾಗದಲ್ಲಿ ಕಾರ್ಗಿಲ್ ವನ ಎಂಬ ಕಾನನದ ಕನಸು ಇಂದು ಚಿಗುರೊಡೆದಿದೆ. ಈ ಜಾಗ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದು ಬೆಟ್ಟ ಮೇಲಿನಿಂದ ಕೆಳಗಡೆ ಕಣಿವೆ ಪ್ರದೇಶದಲ್ಲಿ ವರ್ಷ ಪೂರ್ತಿ ನೀರು ಲಭಿಸುವಂತಹ ಗಿಡ, ಮರಗಳ ಬೆಳವಣಿಗೆಗೆ ಪೂರಕವಾದ ಸ್ಥಳ. ಇದರಲ್ಲಿ ಕಮರ್ಷಿಯಲ್ ಬೆಳೆ ಬೆಳೆಸಿ ಸಚಿನ್ ಗೆ ಬೇಕಾದಷ್ಟು ಹಣ ಮಾಡಲು ಸಾಕಷ್ಟು ಅವಕಾಶಗಳು ಇತ್ತು. ಆದರೂ ತನ್ನಿಂದ ಈ ಪ್ರಕೃತಿಗೆ, ಈ ದೇಶಕ್ಕೆ ಏನಾದರೂ ಕೊಡುಗೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಚಿನ್ ಈ ಕಾರ್ಗಿಲ್ ವನ ನಿರ್ಮಾಣದ ಕಡೆ ಗುರಿ ಸಾಧಿಸಿದರು.


ಇಂದು ಈ ಕಾರ್ಗಿಲ್ ವನ ನಿರ್ಮಾಣದ ಉದ್ಘಾಟನೆಗೆ ಸಚಿನ್ ಗೆ ಯಾವ ರಾಜಕಾರಣಿಗಳೂ, ಯಾವ ಅಧಿಕಾರಿಗಳೂ, ಯಾವ ಪೂರ್ವ ಗೃಹ ಪೀಡಿತ ಹಿತಾಸಕ್ತಿ ಗಳೂ ಕಾಣದೆ ಅವರಿಗೆ ಕಂಡದ್ದು ಈ ದೇಶವನ್ನು ರಾತ್ರಿ, ಹಗಲು ತಮ್ಮ ಜೀವದ ಹಂಗು ತೊರೆದು ಗಡಿಯಲ್ಲಿ ಶತ್ರುಗಳೊಂದಿಗೆ ಸೆಣಸಾಡುವ ನಮ್ಮ ಗಡಿಯನ್ನು ಕಾಯುವ ದೇಶದ ನೈಜ ಸೆಲೆಬ್ರಿಟಿ ಗಳಾಗಿರುವ ನಮ್ಮ ಸೈನಿಕರು. 9 ಜನ ಮಿಲಿಟರಿ ಅಧಿಕಾರಿ, ಸೈನಿಕರು ಇಂದು ‘ ಕಾರ್ಗಿಲ್ ವನ ‘ ದ ಲ್ಲಿ ಗಿಡ ಗಳನು ನೆಟ್ಟು ಇದರ ಉದ್ಘಾಟನೆ ಮಾಡಿರುತ್ತಾರೆ.

ಸಚಿನ್ ರವರ ತಾಯಿಯೇ ಸೈನಿಕರಿಗೆ ಗಿಡಗಳನ್ನು ಹಸ್ತಾಂತರಿಸಿರುವುದೂ ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಮೆರುಗು. ಮನೆಯಲ್ಲಿ ನಮ್ಮ ಹೆತ್ತ ತಾಯಿಯ ಪ್ರತೀ ರೂಪವಾಗಿ ನಮ್ಮನ್ನು ಆರೈಕೆ ಮಾಡುವ ಇನ್ನೊಂದು ತಾಯಿಯೇ ಪ್ರಕೃತಿ ತಾಯಿ. ಬೆಳ್ತಂಗಡಿ ನಿವೃತ್ತ ಸೈನಿಕ ಸಂಘದ ಗೌರವ ಅಧ್ಯಕ್ಷರಾದ ಎಂ. ವೀ. ಭಟ್, ಅಧ್ಯಕ್ಷರಾದ ಕೃಷ್ಣ ಭಟ್, ಗಡಿ ಭದ್ರತಾ ಪಡೆಯ ಸೈನಿಕರಾಗಿ ರುವ ಜಗನ್ನಾಥ್ ಶೆಟ್ಟಿ, ಹರೀಶ್ ರೈ, ರಾಮ್ ಭಟ್, ಸುನಿಲ್ ಶೆಣೈ, ಶ್ರೀಕಾಂತ್ ಗೋರೆ, ಉಮೇಶ್ ಬಂಗೇರ, ಪ್ರಸನ್ನ ಇವರೆಲ್ಲಾ ಗಿಡಗಳನ್ನು ನೆಟ್ಟು ಕಾರ್ಗಿಲ್ ವನದ ಹಸಿರು ಹೊದಿಕೆ ಹಾಸಿರುವರು. ಸಚಿನ್ ರವರು ಯಾವುದೇ ಕಾರಣಕ್ಕೂ ಈ ವನಕ್ಕೆ ತೊಂದರೆ ಆಗದಂತೆ, ಬಾಡಿ ಹೋಗದಂತೆ , ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದಾಗ ಸೈನಿಕರು ಕೂಡಾ ವನ ಸಂರಕ್ಷಣೆ ಆಗುವಂತೆ ನಾವು ಕೂಡಾ ವನದ ಸಂಪರ್ಕ ಇಟ್ಟು ಕೊಳ್ಳುವ ಭರವಸೆ ನೀಡಿದ್ದು ಇದು ಒಂದು ರೀತಿಯಲ್ಲಿ ಕಾಡು ಬೆಳವಣಿಗೆಗೆ ಇಟ್ಟ ಧನಾತ್ಮಕ ಪೀಠಿಕೆ. ಅಂತೂ ಸಚಿನ್ ರವರ ಈ ಪ್ರಯತ್ನ ನಿಜಕ್ಕೂ ನಿಸರ್ಗ ಮಾತೆಯ ಹಸಿರು ಹೊದಿಕೆ ಗೆ ಒಂದು ಒಳ್ಳೆಯ ಪ್ರಯತ್ನ ಮತ್ತು ಇನ್ನು 4 ರಿಂದ 5 ವರ್ಷಗಳಲ್ಲಿ ಈ ಗಿಡಗಳು ಬೆಳೆದು ಒಂದು ಸುಂದರ ವನ ಆಗಿ ಈ ದೇಶ ಮತ್ತು ಪ್ರಕೃತಿಗೆ ಒಳ್ಳೆಯ ಕೊಡುಗೆ ಆಗಲಿದೆ. ಇದು ಶ್ಲಾಘನೀಯ ಮತ್ತು ಎಲ್ಲರಿಗೂ ಪ್ರೆರಣೀಯ…ಜೈ ಜವಾನ್ “ಜೈ ಪ್ರಕೃತಿ ಮಾತೆ”

Spread the love
  • Related Posts

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಂಪುಟ ಸಮಿತಿಯ (ಸಿಸಿಎಸ್) ಉನ್ನತ ಮಟ್ಟದ ಸಭೆ ನಡೆಯಿತು. ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ 5 ಪ್ರಮುಖ ನಿರ್ಧಾರದೊಂದಿಗೆ ಪಹಲ್ಗಾಮ್…

    Spread the love

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಬೆಳ್ತಂಗಡಿ : ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಏ.19 ರಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಹಿಂದೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ…

    Spread the love

    You Missed

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    • By admin
    • April 23, 2025
    • 95 views
    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    • By admin
    • April 20, 2025
    • 58 views
    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    • By admin
    • April 19, 2025
    • 185 views
    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    • By admin
    • April 18, 2025
    • 191 views
    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    • By admin
    • April 9, 2025
    • 97 views
    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ

    • By admin
    • April 8, 2025
    • 113 views
    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ