TRENDING
Next
Prev

ರಾಜ್ಯದ ಪ್ರಮುಖ IASಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರದ ಆದೇಶ!

ಬೆಂಗಳೂರು: ಕೃಷಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್‌ ಕತ್ರಿ ಅವರಿಗೆ ಕಾರ್ಮಿಕ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಿದ್ದು, ಒಟ್ಟು 12 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ನಾಗಾಂಬಿಕಾ ದೇವಿ ಅವರಿಗೆ ಹಾಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

READ ALSO

ಮನೋಜ್‌ ಜೈನ್‌– ವಿಶೇಷ ಆಯುಕ್ತ (ಯೋಜನೆ) ಬಿಬಿಎಂಪಿ, ರಾಜೇಂದ್ರ ಚೋಳನ್ ಪಿ– ವಿಶೇಷ ಆಯುಕ್ತ (ಹಣಕಾಸು–ಐಟಿ) ಬಿಬಿಎಂಪಿ, ವಿನೋತ್ ಪ್ರಿಯಾ– ನಿರ್ದೇಶಕರು, ಎಂಎಸ್‌ಎಂಇ, ಬಿ.ಆರ್‌.ಮಮತಾ– ಹೆಚ್ಚುವರಿ ನಿರ್ದೇಶಕರು, ಸಕಾಲ್‌ ಮಿಷನ್‌, ಸಿಂಧು ಬಿ.ರೂಪೇಶ್–ನಿರ್ದೇಶಕರು, ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್‌ ಸರ್ವಿಸಸ್‌.

ಪೊನ್ನಮ್ಮಾಳ್‌ ಸುನಿಲ್‌ ಕುಮಾರ್‌– ಜಿಲ್ಲಾಧಿಕಾರಿ, ವಿಜಯಪುರ, ರಾಜೇಂದ್ರ ಕೆ.ವಿ– ಜಿಲ್ಲಾಧಿಕಾರಿ, ದಕ್ಷಿಣಕನ್ನಡ, ದರ್ಶನ್‌ ಎಚ್‌.ವಿ– ಸಿಇಒ, ಜಿಲ್ಲಾಪಂಚಾಯಿತಿ, ಬೆಳಗಾವಿ, ಎಚ್‌.ಎನ್‌.ಗೋಪಾಲಕೃಷ್ಣ– ನಿರ್ದೇಶಕ, ಮೈಶುಗರ್‌, ಕವಿತಾ ಎಸ್‌. ಮಣ್ಣಿಕೇರಿ–   ಜಿಲ್ಲಾಧಿಕಾರಿ, ಚಿತ್ರದುರ್ಗ, ವೈ.ಎಸ್‌.ಪಾಟೀಲ– ಜಂಟಿ ನಿರ್ದೇಶಕ, ಆಡಳಿತಾತ್ಮಕ ಸಂಸ್ಥೆ, ಮೈಸೂರು