ಕರುನಾಡಲ್ಲಿ ಕುಣಿದು ಕುಪ್ಪಳಿಸಿದ ಕೊರೋನಾಸುರ! ರಾಜ್ಯದಲ್ಲಿ ಮಿತಿಮೀರಿ ಕಾಡುತ್ತಿದೆ ಕೊರೋನಾ ರಣಕೇಕೆ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಾಹಾಮಾರಿ ಆಟ ಮಿತಿ ಮೀರುತ್ತಿದ್ದು ರಾಜ್ಯದಲ್ಲಿಂದು 2738 ಜನರಿಗೆ ಸೋಂಕು ದೃಢವಾಗಿದ್ದು ರಾಜ್ಯದ ಜನತೆಯನ್ನು ಮತ್ತೆ ಬೆಚ್ಚಿ ಬೀಳಿಸುವಂತೆ ಮಾಡಿದೆ.

ರಾಜ್ಯದಲ್ಲಿಂದು 2738 ಮಂದಿಗೆ ವೈರಸ್ ಸೋಂಕು ತಗುಲಿದ್ದು ಇದುವರೆಗೆ ಒಟ್ಟು 4 ಕ್ಕೆ ಏರಿಕೆಯಾಗಿದೆ.

READ ALSO

ರಾಜ್ಯದಲ್ಲಿ ಸಾವಿನ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ.

ರಾಜ್ಯದಲ್ಲಿಂದು 73ಮಂದಿ ಮಹಾಮಾರಿ ವೈರಸ್ ಆರ್ಭಟಕ್ಕೆ ಬಲಿಯಾಗಿದ್ದು ಸಾವಿನ ಸಂಖ್ಯೆ 757 ಕ್ಕೆ ಏರಿಕೆಯಾಗಿದೆ.

ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಇಂದು 43 ಮಂದಿ ಕೊರೋನಾಸುರನ ಆಟಕ್ಕೆ ಬಲಿಯಾಗಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿಯೂ ಬೆಂಗಳೂರು, ಮಂಗಳೂರು ನಲ್ಲಿ ಪ್ರತಿನಿತ್ಯದಂತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ