ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕ್ಷಯರೋಗ ಆಸ್ಪತ್ರೆ ಇನ್ಮುಂದೆ ಕೊರೋನಾ ಕ್ವಾರಂಟೈನ್ ಸೆಂಟರ್. ರಾಜ್ಯದಲ್ಲೇ ಮೊದಲ ಪ್ರಯತ್ನ: ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ : ಕೊರೊನ ಮಾಹಮಾರಿ ಅತೀ ವೇಗವಾಗಿ ಹಬ್ಬುತ್ತಿದ್ದು, ರಾಜ್ಯದಲ್ಲೇ ಮೊದಲ ಪ್ರಯೋಗವಾಗಿ ಕೊರೊನಾ ದೃಢಪಟ್ಟಿರುವ ರೋಗಲಕ್ಷಣವಿಲ್ಲದ ಕೊರೊನಾ ಸೋಂಕಿತರಿಗೆಂದೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕ್ಷಯ ರೋಗ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಸೋಂಕಿತ ರೋಗಲಕ್ಷಣವಿಲ್ಲದವರ ಕ್ವಾರಂಟೈನ್ ವ್ಯವಸ್ಥೆಗೆಂದು ಸಜ್ಜುಗೊಳಿಸಲಾಗಿದ್ದು, ಇಂದು ಆರು ಜನ ಕೊರೊನಾ ಸೊಂಕಿತರನ್ನು ಯಶಸ್ವಿಯಾಗಿ ಈ ಆಸ್ಪತ್ರೆಗೆ ಸ್ಥಳಾಂತರಿಸಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಆರೋಗ್ಯ ಕ್ರಮಗಳನ್ನು ಪಾಲಿಸಲು ಸೂಚಿಸಲಾಯಿತು.

ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕಂಡುಬರುವ ಕೊರೊನಾ ಸೋಂಕಿತ ರೋಗಲಕ್ಷಣ ರಹಿತರನ್ನು ಇಲ್ಲಿಯೇ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದ್ದು, ಊಟೋಪಚಾರದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮಾಡಲಾಗಿದೆ.

READ ALSO

ರಾಜ್ಯದಲ್ಲೇ ಮೊದಲ ಬಾರಿಗೆ ಇದೊಂದು ಹೊಸ ಯೋಜನೆಯಾಗಿದ್ದು, ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಕೊರೊನಾ‌‌ ಸೋಂಕು ತಡೆಗಟ್ಟಲು ಸಂಪೂರ್ಣ ಬೆಳ್ತಂಗಡಿ ಸಜ್ಜಾಗಿ ನಿಂತಿದೆ.