ಬೆಳ್ತಂಗಡಿ: ಶ್ರೀ ಕ್ಷೇತ್ರ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸಂಪರ್ಕಿಸುವ ಅಣಿಯೂರು ಕಾಟಾಜೆ ರಸ್ತೆಯ ಕಾಂಕ್ರೀಟಿಕರಣಕ್ಕೆ 4ಕೋಟಿ ಮಂಜೂರಾಗಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವನ್ನು ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸ್ತರರು ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಸದಸ್ಯರು, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಸಂತಿ ಉಪಾದ್ಯಕ್ಷೆ ಶ್ರೀಮತಿ ಕುಶಲ ಮತ್ತು ಸದಸ್ಯರಾದ ಸಚಿನ್ ಕೆ ಆರ್, ಶ್ರಿ ದಿನೇಶ್ ನೆಕ್ಕರೆ, ಶ್ರೀ ಬಾಬುಗೌಡ ಪರ್ಪಳ, ಶ್ರೀಮತಿ ಸಜಿತಾ, ಶ್ರೀಮತಿ ಸವಿತಾ ಅಲಂಗಾಯಿ, ಶ್ರೀಮತಿ ಮಾಲತಿ, ಹಾಗೂ ಎಲ್ಲಾ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.