ಕಾನರ್ಪ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ ಬೈಲು, ಹಿರಿಯ ವಿದ್ಯಾರ್ಥಿಗಳ ಸಂಘ ಕೊಡಿಯಾಲ ಬೈಲು ಇದರ ಸಹಯೋಗದೊಂದಿಗೆ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಅರ್ಪಣಂ 2025 ಕಾರ್ಯಕ್ರಮ ದಿನಾಂಕ 27/12/2025ನೇ ಶನಿವಾರದಂದು ನಡೆಯಲಿದೆ.
ಪೂರ್ವಾಹ್ನ 9ಗಂಟೆಗೆ ಧ್ವಜಾರೋಹಣ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಕ್ರೀಡಾಕೂಟ , ವಸ್ತುಪ್ರದರ್ಶನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 6ರಿಂದ ಸರಿಯಾಗಿ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸನ್ಮಾನ
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧಕರಾದ ಸುಮಂತ್ ಕುಮಾರ್ ಜೈನ್ ಎಕ್ಸೆಲ್ ಶಿಕ್ಷಣ ಸಂಸ್ಥೆ ಗುರುವಾಯನಕೆರೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ತುಳು ನಾಟಕ
ಪಾಂಚಜನ್ಯ ಕಲಾವಿದರು ಉಜಿರೆ ಇವರಿಂದ “ಆಯೆ ಏರ್” ? ಹಾಸ್ಯಮಯ ನಾಟಕ ನಡೆಯಲಿದೆ.





