ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿ ಬಾಲಕನ ರಕ್ಷಿಸಿದ ಪೋಲಿಸರು 7ಜನ ಅಪಹರಣಕಾರರ ಬಂಧನ

ಬೆಳ್ತಂಗಡಿ: ಉಜಿರೆಯ ರಥ ಬೀದಿಯಲ್ಲಿ ಆಟವಾಡುತಿದ್ದ ಬಾಲಕನ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲೆ ಎಸ್.ಪಿ. ಕಾರ್ತಿಕ್ ರೆಡ್ಡಿ ನೆರವಿನಿಂದ ಆರೋಪಿಗಳ ಹಾಗೂ ಬಾಲಕ ಪತ್ತೆ ಮಾಡಲಾಗಿದೆ. ಬಾಲಕನ ಪತ್ತೆಗೆ 5 ವಿಶೇಷ ತಂಡ ರಚಿಸಲಾಗಿತ್ತು. ದ.ಕ.‌ಜಿಲ್ಲೆ ಎಸ್.ಪಿ. ಲಕ್ಷ್ಮೀ ಪ್ರಸಾದ್ ಅವರೂ ಉಜಿರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವಿಶೇಷ ಮಾರ್ಗದರ್ಶನ ನೀಡಿದ್ದರು.

READ ALSO

ಒಟ್ಟಿನಲ್ಲಿ ಕೇವಲ 36 ಗಂಟೆಯೊಳಗೆ ಆರೋಪಿಗಳ ಪತ್ತೆ ನಡೆಸುವ ಜೊತೆಗೆ ಪೊಲೀಸರು ಬಾಲಕನ ರಕ್ಷಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೋಲಾರ ಜಿಲ್ಲೆಯ ಮಾಸ್ತಿಯಲ್ಲಿ ಮಗುವನ್ನು ಪತ್ತೆ ಹಚ್ಚಿ ಏಳು ಜನ ಅಪಹರಣಕಾರರನ್ನು ಬಂಧಿಸಿದ್ದಾರೆ.