ಕೊಲ್ಲೂರು: ಶಂಕರಾಚಾರ್ಯರ ತಪೋಭೂಮಿ ಕೊಡಚಾದ್ರಿಯ ಸರ್ವಜ್ಞ ಪೀಠದಲ್ಲಿ ಕಳೆದ 14 ವರ್ಷಗಳಿಂದ ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಕೇಮಾರು ಸಾಂದಿಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಅಧ್ಯಕ್ಷರಾದ ಕೆ.ಕೆ.ಸಾಬು ಇವರ ನೇತೃತ್ವದಲ್ಲಿ ಶಂಕರ ಜಯಂತಿ ನಡೆಯುತ್ತಿದ್ದು, ಕಳೆದ ವರ್ಷ ಮತ್ತು ಪ್ರಸಕ್ತ ವರ್ಷದ ಶಂಕರ ಜಯಂತಿಯನ್ನು ಕೊರೊನ ನಿಮಿತ್ತ ಸಾಂಕೇತಿಕವಾಗಿ ಆಚರಿಸಲಾಯಿತು.
ಕೊರೊನ ಲಾಕ್‌ಡೌನ್ ನಿಮಿತ್ತ 15ನೇ ವರ್ಷದ ಶಂಕರ ಜಯಂತಿಯನ್ನು ಶುಕ್ರವಾರ ಸಾಂಕೇತಿಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೊರೊನ ಹಾಗೂ ಇನ್ನಿತರ ರೋಗ ಮುಕ್ತ ಜಗತ್ತಿಗಾಗಿ ದೇವಿ ಮುಕಾಂಬಿಕೆ ಹಾಗೂ ಶಂಕರಾಚಾರ್ಯರಲ್ಲಿ ಪ್ರಾರ್ಥಿಸಲಾಯಿತು.
ಅರ್ಚಕ ವೃಂದ ಹಾಗೂ ಟ್ರಸ್ಟ್ ಸದಸ್ಯ ಸಿ.ಆರ್. ನಾಗೇಂದ್ರ ಜೋಗಿ ಉಪಸ್ಥಿತರಿದ್ದರು.