ಬೆಂಗಳೂರು : ರಾಜ್ಯ ಸರ್ಕಾರದಿಂದ ಆಂಬುಲೆನ್ಸ್ ಹಗಲು ದರೋಡೆಗೆ ಕಡಿವಾಣ ಹಾಕಲಾಗಿದೆ. ಇದಕ್ಕಾಗಿ ಪ್ರತಿ ಕಿಲೋಮಿಟರ್ ಗೆ ದರ ನಿಗದಿ ಪಡಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ದರ ನಿಗದಿಯಂತೆ ಹಣ ಪಡೆಯೋದಕ್ಕೆ ಖಡಕ್ ಸೂಚನೆಯನ್ನು ನೀಡಿದೆ. ಒಂದು ವೇಳೆ ಈ ನಿಯಮ ಮೀರಿದ್ರೇ.. ಲೈಸೆನ್ಸ್ ಕೂಡ ರದ್ದು ಪಡಿಸೋದಾಗಿಯೂ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಹೆಚ್ಚಿನ ಪ್ರಕರಣಗಳ ಸಂದರ್ಭದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸೋದಕ್ಕೆ ತೊಡಗಿರುವಂತ ಆಂಬುಲೆನ್ಸ್ ಗಳು, ಸೋಂಕಿತರ ಕುಟುಂಬಸ್ಥರಿಂದ ಹಣದ ಸುಲಿಗೆಯನ್ನೇ ಮಾಡುತ್ತಿರೋದಾಗಿ ಕೇಳಿ ಬಂದಿತ್ತು. ಅನೇಕರು ಆಂಬುಲೆನ್ಸ್ ಗಳ ಹಣ ಮಾಡೋ ದಂಧೆಗೆ ಬ್ರೇಕ್ ಹಾಕುವಂತೆಯೂ ಸಾರಿಗೆ ಇಲಾಖೆ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಕುರಿತಂತೆ ಸಾರಿಗೆ ಸಚಿವರು, ಆರೋಗ್ಯ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಾಯಿತು. ಇಂತಹ ಸಭೆಯಲ್ಲಿ ಆಂಬುಲೆನ್ಸ್ ಗಳ ಮನಸೋ ಇಚ್ಛೆ ಹಣ ವಸೂಲಿಗೆ ಬ್ರೇಕ್ ಹಾಕುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ಮುಂದೆ ಆಂಬುಲೆನ್ಸ್ ಗಳಿಗೆ 10 ಕಿಲೋಮಿಟ್ ವರೆಗೆ 1,500 ರೂಪಾಯಿ ದರ ನಿಗದಿ ಮಾಡಿದೆ. 10 ಕಿಲೋಮೀಟರ್ ನಂತ್ರಕ್ಕೆ 120 ದರ ನಿಗದಿ ಮಾಡಿದೆ. ಅಲ್ಲದೇ ವೆಯಟಿಂಗ್ ಚಾರ್ಜ್ ಆಗಿ ಪ್ರತಿ ಗಂಟೆಗೆ ರೂ.200 ನಿಗದಿ ಮಾಡಿದೆ.
ಇನ್ನೂ ಲೈಫ್ ಸಪೋರ್ಟ್ ಹೊಂದಿರುವಂತ ಆಂಬುಲೆನ್ಸ್ ಗಳಿಗೆ 10 ಕಿಲೋಮೀಟರ್ ಗೆ 2000 ರೂಪಾಯಿ ದರ ನಿಗದಿ ಮಾಡಿದೆ. 10 ಕಿಲೋಮೀಟರ್ ನಂತ್ರದ 120 ರೂಪಾಯಿಯ ದರವನ್ನು ನಿಗದಿ ಮಾಡಿದೆ. ಅಲ್ಲದೇ ಪ್ರತಿ ಗಂಟೆಗೆ ಕಾಯುವಿಕೆಯ ಚಾರ್ಜ್ ಆಗಿ ರೂ.250 ದರ ನಿಗದಿ ಪಡಿಸಿ, ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿ, ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದೆ.