ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೋಮಂತಡ್ಕ ಬಸ್ ನಿಲುಗಡೆ ವಿಚಾರದಲ್ಲಿ ಗಂಭೀರ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲೇ “ವೇಗದೂತ ಹಾಗೂ ಸಾಮಾನ್ಯ ಬಸ್ ನಿಲುಗಡೆ” ಎಂದು ಬೋರ್ಡ್ ಅಳವಡಿಸಿರುವುದರ ಜೊತೆಗೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದಲೂ ಅಧಿಕೃತ ಆದೇಶ ನೀಡಲಾಗಿದ್ದರೂ ಈ ಆದೇಶವನ್ನು ಕ್ಯಾರೇ ಮಾಡದೇ ಪ್ರಯಾಣಿಕರಿಗೆ ಕೋರಿಕೆ ನಿಲುಗಡೆ ಬಗ್ಗೆ ಕೇಳಿದರೂ ಬಸ್ ನಿಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಿಲುಗಡೆ ಬೋರ್ಡ್, ಆದೇಶ ಇದ್ದರೂ ನಿಲ್ಲದ ಬಸ್: KSRTC ವಿರುದ್ಧ ಆಕ್ರೋಶ”

ಮೂಡಿಗೆರೆ ಡಿಪ್ಪೊಗೆ ಸೇರಿದ ಚಿಕ್ಕಮಗಳೂರು–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆಯ ಮೂಡಿಗೆರೆ ಡಿಪ್ಪೋಗೆ ಸೇರಿದ KA42F2184 ಬಸ್ ಚಾಲಕ ಹಾಗೂ ನಿರ್ವಾಹಕರು ಮುಂಡಾಜೆ/ಸೋಮಂತಡ್ಕ ನಿಲ್ದಾಣದಲ್ಲಿ ದಿನಾಂಕ 18/04/2026ಶನಿವಾರ ರಾತ್ರಿ ಹೊತ್ತಿನಲ್ಲಿ ಸುಮಾರು 8.05ರ ಸಮಯದಲ್ಲಿ ನಿಲ್ಲಿಸದೇ ಮುಂದುವರಿದಿರುವುದು ವರದಿಯಾಗಿದೆ. ಇದರಿಂದ ನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

“ನಿಗದಿತ ನಿಲುಗಡೆ ಮೀರಿ 7 ಕಿ.ಮೀ ದೂರದಲ್ಲಿ ಇಳಿಸಿದ ಚಾಲಕ: ಪ್ರಯಾಣಿಕರಿಗೆ ಸಜೆ?”

ಮುಂದಿನ ಸ್ಟೇಜ್ ಗೆ ಟಿಕೆಟ್ ಪಡೆದವರಿಗೆ ಆದರ ಹಿಂದೆ ಎಲ್ಲಿ ಬೇಕಾದರೂ ಇಳಿಯಬಹುದು ಎಂಬುದು ಸಂಸ್ಥೆಯ ನಿಯಮ ಇದ್ದರೂ ಪ್ರಯಾಣಿಕರ ಪ್ರಕಾರ, ಈ ಪ್ರದೇಶದಲ್ಲಿ ಬಸ್ಸನ್ನು ನಿಲುಗಡೆ ಮಾಡದೇ ಸುಮಾರು 7ಕಿ.ಮೀ ದೂರದ ಉಜಿರೆ ಪಟ್ಟಣದವರೆಗೆ ಸಾಗಿಸಲಾಗಿದ್ದು, ಮಧ್ಯದಲ್ಲಿ ಇಳಿಯಬೇಕಿದ್ದವರು ಅನಿವಾರ್ಯವಾಗಿ ದೂರ ಪ್ರಯಾಣಿಸಬೇಕಾಯಿತು. ಈ ಹಿಂದೆ ಮಹಿಳಾ ಪ್ರಯಾಣಿಕರಿಗೂ ರಾತ್ರಿ ವೇಳೆಯಲ್ಲಿ ಇದೇ ರೀತಿ ಆಗಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು.

“ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

ಸ್ಥಳದಲ್ಲೇ ನಿಲುಗಡೆ ಬೋರ್ಡ್ ಹಾಗೂ ಸಂಬಂಧಿತ ಪ್ರಾಧಿಕಾರದಿಂದ ಅಧಿಕೃತ ಆದೇಶ ಇದ್ದರೂ ಬಸ್ ನಿಲ್ಲಿಸದಿರುವುದು ಗಂಭೀರ ನಿರ್ಲಕ್ಷ್ಯವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ಸೋಮಂತಡ್ಕ ಸ್ಟೇಜ್ ಯಾಕಿಲ್ಲ!!!?????

ಚಾರ್ಮಾಡಿ, ಕಕ್ಕಿಂಜೆ, ಸೋಮಂತ್ತಡ್ಕ, ಉಜಿರೆ ಇವು ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದ್ದು ಸೋಮಂತ್ತಡ್ಕ ಪ್ರದೇಶದಲ್ಲಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಬ್ಯಾಂಕ್ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಪ್ರಮುಖ ಪಟ್ಟಣ ಇದಾಗಿದ್ದು ಸಾರಿಗೆ ಸಂಸ್ಥೆಯ ಸ್ಟೇಜ್ ನಲ್ಲಿ ಸೋಮಂತಡ್ಕದ ಹೆಸರನ್ನು ಕೈಬಿಟ್ಟಿದ್ದು ಈ ಪ್ರದೇಶದಲ್ಲಿ ಬಸ್ ಗಳಲ್ಲಿ ಸಂಚರಿಸಬೇಕಾದರೆ ಮುಂದಿನ 7ಕಿ.ಮೀ ದೂರದ ಉಜಿರೆ ಸ್ಟೇಜ್ ಗೆ ಟಿಕೆಟ್ ಪಡೆಯಬೇಕು ಹಾಗೂ ಉಜಿರೆ ಸ್ಟೇಜ್ ಗೆ ಟಿಕೆಟ್ ನೀಡಿದರೂ ಸೋಮಂತ್ತಡ್ಕದಲ್ಲಿ ಬ‌ಸ್ ನಿಲುಗಡೆ ಮಾಡದೇ ದಿವ್ಯನಿರ್ಲಕ್ಷ ವಹಿಸುತ್ತಿದ್ದಾರೆ

ಶಾಲಾಕಾಲೇಜು ಮಕ್ಕಳ ಸಂಚಾರಕ್ಕೂ ವಿಘ್ನ!!!!!

ಈ ಬಗ್ಗೆ ಹಲವು ಬಾರಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರೂ ವೇಗದೂತ ಬಸ್ ಗಳು ಈ ಪ್ರದೇಶದಲ್ಲಿ ನಿಲುಗಡೆ ನೀಡದೇ ಇರುವುದು ವಿಪರ್ಯಾಸವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಬಸ್ ಗಳಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆಯೂ ಕೂಡಲೇ ಸಂಬಂಧಪಟ್ಟವರು ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕಾಗಿದೆ.

ಈ ಬಗ್ಗೆ ತೊಂದರೆಗೊಳಗಾದ ಪ್ರಯಾಣಿಕರು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಹಾಗೂ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಸಚಿವರಿಗೂ ಪತ್ರ ಬರೆಯುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

ಈ ಘಟನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟುಮಾಡಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Spread the love
  • Related Posts

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲು ಬಸ್ ನಿಲ್ದಾಣದ ಸಮೀಪ ಸೆ. 3ರಂದು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ಆನೆ ಪ್ರತ್ಯಕ್ಷವಾಗಿ ಆತಂಕ ಉಂಟುಮಾಡಿದ ಘಟನೆ ವರದಿಯಾಗಿದೆ. ಉಜಿರೆ–ಬೆಳಾಲು–ಬಂದಾರು ಮುಖ್ಯ ರಸ್ತೆಯ ಮಿನಂದೇಲು ಬಸ್ ನಿಲ್ದಾಣ ಹಾಗೂ ಡಿ.ಪಿ.…

    Spread the love

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    ಬೆಳ್ತಂಗಡಿ: ಧರ್ಮಸ್ಥಳ- ಕೊಕ್ಕಡ ರಸ್ತೆಯ ಧರ್ಮಸ್ಥಳ ಸಮೀಪದ ಕಲ್ಲೇರಿ ಪರಿಸರದ ಪುದುವೆಟ್ಟು ಕ್ರಾಸ್ ಬಳಿ ಗುರುವಾರ ರಾತ್ರಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಾಡಾನೆ ಹೆದ್ದಾರಿ ಬದಿಯಲ್ಲಿ…

    Spread the love

    You Missed

    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    • By admin
    • September 3, 2026
    • 5 views
    ಬೆಳಾಲಿನಲ್ಲಿ ರಸ್ತೆಯ ಮಧ್ಯೆ ಕಾಡಾನೆ ಪ್ರತ್ಯಕ್ಷ: ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    • By admin
    • September 3, 2026
    • 4 views
    ಧರ್ಮಸ್ಥಳ ಕೊಕ್ಕಡ ಹೆದ್ದಾರಿ ಬದಿಯಲ್ಲಿ ಕಾಡಾನೆ ಪ್ರತ್ಯಕ್ಷ, ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ

    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    • By admin
    • September 3, 2026
    • 5 views
    APK ಬಳಿಕ .IMG, .ISO ಫೈಲ್‌ಗಳ ಮೂಲಕ ಸೈಬರ್ ದಾಳಿ; WhatsApp Web ಬಳಕೆದಾರರಿಗೆ ಎಚ್ಚರಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    • By admin
    • September 3, 2026
    • 12 views
    ಚಿರಂಜೀವಿ ಯುವಕ ಮಂಡಲ ಕಾನರ್ಪದಲ್ಲಿ ಸೆ.6ರಂದು 35ನೇ ವರ್ಷದ ಮೊಸರು ಕುಡಿಕೆ ಅಷ್ಟಮಿ ಉತ್ಸವ ಹಾಗೂ ಕೆಸರುಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ

    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    • By admin
    • August 31, 2026
    • 7 views
    ಬೆಳ್ತಂಗಡಿ : ಲಾಯಿಲ ಗ್ರಾಮಸಭೆಯಲ್ಲಿ ಅಕ್ರಮಗಳ ಆರೋಪಕ್ಕೆ ಕಿಡಿ, ನಿವೇಶನದಿಂದ ಸರ್ಕಾರಿ ಜಮೀನು, ಕಳಪೆ ಕಾಮಗಾರಿವರೆಗೆ ಸಮಗ್ರ ತನಿಖೆಗೆ ಒತ್ತಾಯ

    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ

    • By admin
    • August 27, 2026
    • 9 views
    ನಾಟ ಫಲಿತಾಂಶ: ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ