ಬೆಂಗಳೂರು : ರಾಜ್ಯ ಸಾರಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕೆಎಸ್ ಆರ್ ಟಿಸಿ ನೌಕರರಿಗೆ ಜನತಾ ಕರ್ಪ್ಯೂ ಅವಧಿಯಲ್ಲೂ ವೇತನ ನೀಡಲು ನಿರ್ಧರಿಸಲಾಗಿದ್ದು, ನೌಕರರ ಹಾಜರಾತಿ ಸಲ್ಲಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಎಲ್ಲ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಜನತಾ ಕರ್ಪ್ಯೂ ವೇಳೆ ಬಸ್ ಗಳು ಸೇವೆ ನೀಡದ ಕಾರಣ ಸಿಬ್ಬಂದಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ ಎನ್ನಲಾಗಿತ್ತು. ಆದರೆ ನೌಕರರಿಗೆ ವೇತನ ಮತ್ತು ತರಬೇತಿ ಭತ್ಯೆ ಪಾವತಿಗೆ ಪರಿಗಣಿಸುವಂತೆ ನಿರ್ದೆಶಿಸಲಾಗಿದೆ.
ಇನ್ನು ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಏಪ್ರಿಲ್ 7 ರಿಂದ 21 ರವರೆಗೆ ನಡೆದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರಿಗೆ ವೇತನ ಪಾವತಿಸುವ ಕುರಿತಂತೆ ನಿಗಮದಿಂದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ.